Telegram Join My Telegram   WhatsApp Join My WhatsApp

ವಿಜಯನಗರ ಸಾಮ್ರಾಜ್ಯ ಸಂಪೂರ್ಣ ಮಾಹಿತಿ | History in Kannada for Competitive Exams

Spread the love

🔴 ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಮಹತ್ವವನ್ನು ಹೊಂದಿದೆ. 14 ರಿಂದ 17ನೇ ಶತಮಾನದವರೆಗೆ ಈ ಸಾಮ್ರಾಜ್ಯ ರಾಜಕೀಯ, ಸಂಸ್ಕೃತಿ, ಸೈನಿಕ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಯನ್ನು ಪಡೆದುಕೊಂಡಿದೆ. ಮುಖ್ಯವಾಗಿ ಹೇಳಬೇಕೆಂದರೆ ಈ ಸಾಮ್ರಾಜ್ಯ ಬಂದು UPSC,KAS,SSC,RRB ಪರೀಕ್ಷೆಗಳಲ್ಲಿ ಹಲವಾರು ಬಾರಿ ಈ ವಿಜಯನಗರ ಸಾಮ್ರಾಜ್ಯದ ಬಗ್ಗೆ ಕೇಳುತ್ತಾರೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮತ್ತು ಹಿನ್ನೆಲೆ

  • ವಿಜಯನಗರ ಸಾಮ್ರಾಜ್ಯವನ್ನು 1336ರಲ್ಲಿ ಹರಿಹರ ಮತ್ತು ಬುಕ್ಕರಾಯ ಸ್ಥಾಪನೆ ಮಾಡುತ್ತಾರೆ. ಇವರಿಗೆ ವಿದ್ಯಾರಣ್ಯರು ಮಹತ್ವದ ಮಾರ್ಗದರ್ಶನ ಮಾಡುತ್ತಾರೆ. ಈ ಸಾಮ್ರಾಜ್ಯವು ತುಂಗಭದ್ರಾ ನದಿ ತೀರದಲ್ಲಿ ಸ್ಥಾಪನೆಯಾಗಿದೆ. ಈ ವಿಜಯನಗರ ಸಾಮ್ರಾಜ್ಯದ ರಾಜಧಾನಿ ಬಂದ್ಬಿಟ್ಟು ಹಂಪಿ ಆಗಿತ್ತು.
  • ವಿಜಯನಗರ ಸಾಮ್ರಾಜ್ಯ ಸ್ಥಾಪನೆಯ ಮುಖ್ಯ ಉದ್ದೇಶ 
  • ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ದಾಳಿಯನ್ನು ತಡೆಗಟ್ಟುವುದು
  • ಹಿಂದೂ ಧರ್ಮ ಮತ್ತು ಸಂಸ್ಕೃತಿಯನ್ನು ಉಳಿಸುವುದು 
  • ದಕ್ಷಿಣ ಭಾರತದ ರಾಜಕೀಯವನ್ನು ಏಕೀಕರಣಗೊಳಸುವುದು

ವಿಜಯನಗರ ಸಾಮ್ರಾಜ್ಯದ ಪ್ರಮುಖ ವಂಶಗಳು 

 ವಿಜಯನಗರ ಸಾಮ್ರಾಜ್ಯವನ್ನು ಪ್ರಮುಖವಾಗಿ ನಾಲ್ಕು ರಾಜ್ಯಗಳು ಆಳಿದವು. 

1) ಸಂಗಮ ವಂಶ (1336-1485)

2) ಸಾಳುವ ವಂಶ (1485-1505)

3) ತುಳುವ ವಂಶ (1505-1570)

4) ಅರವಿಡು ವಂಶ (1570-1646)

👉 ಇವುಗಳಲ್ಲಿ ತುಳುವ ವಂಶ ಅತ್ಯಂತ ಪ್ರಭಾವಿ ಆಗಿತ್ತು 

ಶ್ರೀ ಕೃಷ್ಣದೇವರಾಯರ ಕಾಲ- ಸುವರ್ಣ ಯುಗ 

ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಜನು ಶ್ರೀ ಕೃಷ್ಣದೇವರಾಯ ಆಗಿರುತ್ತಾರೆ. ಇವರ ಆಳ್ವಿಕೆ (1509-1529) ವಿಜಯನಗರದ ಸುವರ್ಣ ಯುಗ ಎಂದು ಕರೆಯುತ್ತಾರೆ.

ಶ್ರೀ ಕೃಷ್ಣದೇವರಾಯರ ಸಾಧನೆಗಳು 
  • ಬಲಿಷ್ಟ ಸೈನ್ಯ ನಿರ್ಮಾಣ 
  • ಬಹುಮನಿ ಮತ್ತು ಇತರ ಸುಲ್ತಾನರಗಳ ನಡುವೆ ಜಯಗಳನ್ನು ಸಾಧಿಸುತ್ತಾರೆ 
  • ಕೃಷಿ ಮತ್ತು ನೀರಾವರಿ ಅಭಿವೃದ್ಧಿ 
  • ಸಾಹಿತ್ಯ ಮತ್ತು ಕಲೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾರೆ. 
  • ಇವರು ರಚಿಸಿದ ಪ್ರಮುಖ ಗ್ರಂಥ ಅಮುಕ್ತ ಮೌಲ್ಯ ಪ್ರಸಿದ್ಧಿಯನ್ನು ಪಡೆದುಕೊಂಡಿದೆ.
ವಿಜಯನಗರ ಸಾಮ್ರಾಜ್ಯದ ಆಡಳಿತ ವ್ಯವಸ್ಥೆ 

ವಿಜಯನಗರ ಸಾಮ್ರಾಜ್ಯವು ಬಹಳ ಉತ್ತಮವಾಗಿತ್ತು ಮತ್ತು ಸಾಂಘಟಿತವಾಗಿತ್ತು. 

ಮುಖ್ಯ ಅಂಶಗಳು 

  • ರಾಜನು ಪರಮಾಧಿಕಾರಿ 
  • ರಾಜ್ಯವನ್ನು ಪ್ರಾಂತ್ಯಗಳಾಗಿ ವಿಭಜನೆ 
  • ಪ್ರಾಂತ್ಯಗಳಲ್ಲಿ ನಾಯಕರ ನಿರ್ವಹಣೆ 
  • ನಾಯಕರ ವ್ಯವಸ್ಥೆ 

ಆರ್ಥಿಕ ವ್ಯವಸ್ಥೆ 

  • ಭೂಮಿಯ ತೆರಿಗೆ ಮುಖ್ಯ ಆದಾಯ 
  • ವಾಣಿಜ್ಯ ಮತ್ತು ವ್ಯಾಪಾರ ಅಭಿವೃದ್ಧಿ 
  • ವಿದೇಶಿ ವ್ಯಾಪಾರ (ಅರಬ್ಬ, ಪರ್ಶಿಯ, ಪೋರ್ಚುಗೀಸ್)

ಸೈನಿಕ ವ್ಯವಸ್ಥೆ 

ವಿಜಯನಗರ ಸಾಮ್ರಾಜ್ಯವು ಬಲಿಷ್ಠ ಸೈನಿಕರನ್ನು ಹೊಂದಿತ್ತು 

  • ದೊಡ್ಡ ಕಾಲು ಸೇನೆ 
  • ಅಶ್ವಸೇನೆ ಮತ್ತು ಆನೆಸೇನೆ 
  • ಕೋಟೆಗಳ ನಿರ್ಮಾಣ 
  • ಗನ್ ಮತ್ತು ತೂಪುಗಳ ಬಳಕೆ 

ಕಲೆ, ವಾಸ್ತುಶಿಲ್ಪ ಮತ್ತು ಸಂಸ್ಕೃತಿ 

ವಿಜಯನಗರ ಸಾಮ್ರಾಜ್ಯವು ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೇಷ್ಠವಾಗಿತ್ತು

ಪ್ರಮುಖ ಸ್ಥಳಗಳು 

  • ವಿರೂಪಾಕ್ಷ ದೇವಸ್ಥಾನ
  • ವಿಠ್ಠಲ ದೇವಸ್ಥಾನ
  • ಹಜಾರ ರಾಮ ದೇವಸ್ಥಾನ 

ವಿಜಯನಗರ ಸಾಮ್ರಾಜ್ಯದ ವಾಸ್ತು ಶೈಲಿಯ ಲಕ್ಷಣಗಳು 

  • ಉನ್ನತ ಗೋಪುರಗಳು 
  • ಶಿಲ್ಪ ಕಲೆ 
  • ಕಲ್ಲಿನ ರಥ
ವಿಜಯನಗರ ಸಾಮ್ರಾಜ್ಯದ ಹಂಪಿಯ ಕಲ್ಲಿನ ರಥ
ವಿಜಯನಗರ ಸಾಮ್ರಾಜ್ಯಕ್ಕೆ ಸಂಬಂಧಿಸಿದ ಹಂಪಿಯ ಕಲ್ಲಿನ ರಥ

ವಿಜಯನಗರ ಸಾಮ್ರಾಜ್ಯದ ಸಾಹಿತ್ಯ ಮತ್ತು ಭಾಷೆ 

ಈ ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಕನ್ನಡ, ತೆಲುಗು ತಮಿಳು, ಸಂಸ್ಕೃತ ಸಾಹಿತ್ಯವು ಅಭಿವೃದ್ಧಿ ಹೊಂದಿತ್ತು

ವಿಜಯನಗರ ಸಾಮ್ರಾಜ್ಯದ ಪ್ರಮುಖ ಕವಿಗಳು

  • ಅಲ್ಲಸಾಣಿ ಪೆದ್ದನ್ನ
  • ನಂದಿ ತಿಮ್ಮಣ್ಣ 
  • ಪಿಂಗಳ್ಳಿ ಸುರಣ್ಣ

ಈ ಕವಿಗಳನ್ನು ಅಷ್ಟದಿಗ್ಗಜರು ಅಂತ ಕರೆಯುತ್ತಾರೆ 

ವಿದೇಶಿ ಪ್ರವಾಸಿಗರ ವಿವರಣೆ

ವಿಜಯನಗರದ ವೈಭವವನ್ನು ಅನೇಕ ಪ್ರವಾಸಿಗರು ವರ್ಣಿಸಿದ್ದಾರೆ. 

  • ಅಬ್ದುಲ್ ರಜಾಕ್ 
  • ನಿಕೋಲಾ ಕಂಟಿ
  • ಡೋಮಿಂಗೋ ಫಯಾಸ್

ಇವರು ವಿಜಯನಗರವನ್ನು ಅತ್ಯಂತ ಶ್ರೀಮಂತ ನಗರ ಎಂದು ವರ್ಣಿಸಿದ್ದಾರೆ. 

ತಾಳಿಕೋಟೆ ಯುದ್ಧ ಮತ್ತು ಪತನ 

1565 ರಲ್ಲಿ ನಡೆದ ತಾಳಿಕೋಟೆ ಯುದ್ಧ ವಿಜಯನಗರ ಸಾಮ್ರಾಜ್ಯದ ಪತನಕ್ಕೆ ಕಾರಣವಾಯಿತು.

ಯುದ್ಧದ ವಿವರ 

  • ವಿಜಯನಗರ VS ದಕ್ಕನ್ ಸುಲ್ತಾನರು
  • ವಿಜಯನಗರದ ಸೋಲು 
  • ಹಂಪಿ ನಗರ ಧ್ವಂಸ 

ಈ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯ ದುರ್ಬಲವಾಗಿ, ಸಂಪೂರ್ಣವಾಗಿ ಕುಸಿಯಿತು.

ವಿಜಯನಗರ ಸಾಮ್ರಾಜ್ಯದ ಮಹತ್ವ 

ರಾಜಕೀಯ 

  • ದಕ್ಷಿಣ ಭಾರತದ ಏಕೀಕರಣ 
  • ಬಲಿಷ್ಠ ಆಡಳಿತ ವ್ಯವಸ್ಥೆ 

ಆರ್ಥಿಕ 

  • ಕೃಷಿ ಮತ್ತು ವ್ಯಾಪಾರ ಅಭಿವೃದ್ಧಿ 
  • ಅಂತರಾಷ್ಟ್ರೀಯ ವ್ಯಾಪಾರ 

ಸಾಂಸ್ಕೃತಿಕ 

  • ದೇವಸ್ಥಾನದ ವಾಸ ಶಿಲ್ಪ 
  • ಸಾಹಿತ್ಯ ಮತ್ತು ಸಂಗೀತ ಅಭಿವೃದ್ಧಿ

ವಿಜಯನಗರ ಸಾಮ್ರಾಜ್ಯದ ನಯಂಕಾರ ವ್ಯವಸ್ಥೆ

ವಿಜಯನಗರ ಸಾಮ್ರಾಜ್ಯದಲ್ಲಿ ಪ್ರಮುಖ ಆಡಳಿತ ವ್ಯವಸ್ಥೆ ಯಾವುದೆಂದರೆ ನಯಂಕಾರ ವ್ಯವಸ್ಥೆ. ಈ ವ್ಯವಸ್ಥೆಯಲ್ಲಿ ನಾಯಕರು ಎಂಬ ಪ್ರಭುಗಳಿಗೆ ಭೂಮಿಯನ್ನು ನೀಡಲಾಗುತ್ತಿತ್ತು.

ಮುಖ್ಯ ಅಂಶಗಳು 

  • ನಾಯಕರು ತಮ್ಮ ಪ್ರದೇಶದಿಂದ ತೆರಿಗೆ ಸಂಗ್ರಹಿಸುತ್ತಿದ್ದರು 
  • ಅವರು ಸೈನ್ಯವನ್ನು ನಿರ್ವಹಿಸಬೇಕು 
  • ಯುದ್ಧ ಸಮಯದಲ್ಲಿ ರಾಜನಿಗೆ ಸಹಾಯ ಮಾಡಬೇಕು 
  • ಕೇಂದ್ರ ಆಡಳಿತಕ್ಕೆ ವಿಧೆಯರಾಗಿರಬೇಕು

ಇದು ಪ್ಯೊಡಲ್ ವ್ಯವಸ್ಥೆಯಾಗಿದ್ದರು ಕೇಂದ್ರ ಸರ್ಕಾರದ ನಿಯಂತ್ರಣ ಹೆಚ್ಚಾಗಿತ್ತು

ನಾಣ್ಯ ವ್ಯವಸ್ಥೆ

ವಿಜಯನಗರ ಸಾಮ್ರಾಜ್ಯವು ತನ್ನದೇ ಆದ ನಾಣ್ಯ ವ್ಯವಸ್ಥೆಯನ್ನು ಹೊಂದಿತ್ತು. 

  • ಚಿನ್ನದ ನಾಣ್ಯ ಪಗೋಡಾ
  • ಬೆಳ್ಳಿ ಮತ್ತು ತಾಮ್ರದ ನಾಣ್ಯಗಳು 
  • ನಾಣ್ಯಗಳ ಮೇಲೆ ದೇವತೆಯ ಚಿತ್ರಗಳು

ಸಮಾಜ ವ್ಯವಸ್ಥೆ 

ವಿಜಯನಗರ ಸಾಮ್ರಾಜ್ಯ ವರ್ಣ ವ್ಯವಸ್ಥೆಯ ಮೇಲೆ ಆಧಾರವಾಗಿತ್ತು. 

ಮುಖ್ಯ ಲಕ್ಷಣ 

  • ಬ್ರಾಹ್ಮಣರಿಗೆ ವಿಶೇಷ ಸ್ಥಾನಮಾನ 
  • ಯೋಧ ವರ್ಗದ ಪ್ರಾಬಲ್ಯ 
  • ವ್ಯಾಪಾರಿಗಳ ಸ್ವಭಾವ 

ಮಹಿಳೆಯರ ಸ್ಥಿತಿ 

  • ರಾಜ ಮನೆತನದಲ್ಲಿ ಮಹಿಳೆಯರಿಗೆ ಗೌರವ
  • ಶಿಕ್ಷಣದಲ್ಲಿ ಕೆಲವು ಅವಕಾಶಗಳನ್ನು ನೀಡಲಾಗಿತ್ತು
  • ಆದರೆ ಇಲ್ಲಿ ಸತಿ ಪದ್ಧತಿ ಇತ್ತು

ಧಾರ್ಮಿಕ ಸಹಿಷ್ಣುತೆ 

ವಿಜಯನಗರ ಸಾಮ್ರಾಜ್ಯವು ಹಿಂದುಗಳ ರಾಜ್ಯವಾಗಿದ್ದರೂ ಇತರ ಧರ್ಮಗಳಿಗೆ ಸಹಿಷ್ಣುತೆಯನ್ನು ತೋರಿಸಿತ್ತು.

  • ಜೈನ ಧರ್ಮ ಮತ್ತು ಬೌದ್ಧ ಧರ್ಮಕ್ಕೆ ಬೆಂಬಲ ನೀಡಲಾಗಿತ್ತು 
  • ಮಸೀದಿಗಳ ನಿರ್ಮಾಣಕ್ಕೆ ಅವಕಾಶ ನೀಡಲಾಗಿತ್ತು 

ಇದು ಸಾಮ್ರಾಜ್ಯದ ವಿಶಾಲ ಮನೋಭಾವವನ್ನು ತಿಳಿಸುತ್ತದೆ. 

ಜಲ ವ್ಯವಸ್ಥೆ ಮತ್ತು ಇಂಜಿನಿಯರಿಂಗ್ ಸಾಧನಗಳು 

  • ಆಣೆಕಟ್ಟುಗಳ ನಿರ್ಮಾಣ 
  • ಕಾಲುವೆಗಳ ಜಾಲ 
  • ನೀರಿನ ಸಂಗ್ರಹಣೆ

ಉದಾಹರಣೆಗೆ 

  • ಕಮಲಾಪುರ ಟ್ಯಾಂಕ್ 
  • ತುಂಗಭದ್ರಾ ಅಣೆಕಟ್ಟು

ಇವುಗಳು ಕೃಷಿ ಉತ್ಪಾದನೆಯನ್ನು ಹೆಚ್ಚಿಸಿತು

ಕೋಟೆ ಮತ್ತು ನಗರ ಯೋಜನೆ

ಹಂಪಿ ನಗರವು ಅತ್ಯಂತ ನಗರ ಯೋಚಿತವಾಗಿತ್ತು.

ಲಕ್ಷಣಗಳು 

  • ಬಹುಪದರ ಕೋಟಿಗಳು 
  • ಮಾರುಕಟ್ಟೆ ಪ್ರದೇಶಗಳು 
  • ಅರಮನೆಗಳು ಮತ್ತು ದೇವಸ್ಥಾನಗಳು

ವಿದೇಶಿ ಪ್ರವಾಸಿಗರು ಈ ನಗರವನ್ನು ರೂಮ್ ನಗರಕ್ಕೆ ವರ್ಣಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಸಂಗೀತ ಮತ್ತು ನೃತ್ಯ

ವಿಜಯನಗರ ಸಾಮ್ರಾಜ್ಯದಲ್ಲಿ ಸಂಗೀತ ಮತ್ತು ನೃತ್ಯ ಬೆಳವಣಿಗೆಯನ್ನು ಕಂಡವು 

  • ಭರತನಾಟ್ಯ ಮತ್ತು ಯಕ್ಷಗಾನ ಅಭಿವೃದ್ಧಿ ಆಯಿತು 
  • ದೇವಸ್ಥಾನದಲ್ಲಿ ಸಂಗೀತ ಕಾರ್ಯಕ್ರಮಗಳು ನಡೆದವು

ಈ ವಿಜಯನಗರ ಸಾಮ್ರಾಜ್ಯದಲ್ಲಿ ಕಲೆ ಮತ್ತು ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹವನ್ನು ನೀಡಲಾಯಿತು.

ಕೃಷಿ ಅಭಿವೃದ್ಧಿಯಲ್ಲಿ 

  • ದೊಡ್ಡ ಪ್ರಮಾಣದ ನೀರಾವರಿ ಯೋಜನೆಗಳು ಆದವು 
  • ಕಾಲುವೆಗಳು ಮತ್ತು ಕೆರೆಗಳ ನಿರ್ಮಾಣವಾಯಿತು 
  • ಬೆಳೆಗಳು: ಅಕ್ಕಿ, ಸಕ್ಕರೆ, ಕಬ್ಬು ಬೆಳೆದರು

ವಿಜಯನಗರ ಸಾಮ್ರಾಜ್ಯದ ಪತನದ ಸ್ಥಿತಿಯ ನಂತರ ಏನಾಯ್ತು? 

  • ಹಂಪಿ ಸಂಪೂರ್ಣವಾಗಿ ನಾಶವಾಯಿತು 
  • ಆಡಳಿತ ಅರವಿಡು ವಂಶಕ್ಕೆ ವರ್ಗಾವಣೆ ಆಯಿತು 
  • ರಾಜಧಾನಿ ಪೆಣಕೊಂಡಕ್ಕೆ ಬದಲಾವಣೆ ಆಯಿತು

ಆದರೆ ಸಾಮ್ರಾಜ್ಯ ಪ್ರಭಾವವಾಗಿ ಮುಂದುವರೆಯಿತು 

ವಿಜಯನಗರ ಸಾಮ್ರಾಜ್ಯದ ವಾರಸತ್ತು

  • ದಕ್ಷಿಣ ಭಾರತದ ದೇವಸ್ಥಾನದ ಶೈಲಿ 
  • ಭಾಷಾ ಮತ್ತು ಸಾಹಿತ್ಯ ಅಭಿವೃದ್ಧಿ 
  • ಕೃಷಿ ಮತ್ತು ನೀರಾವರಿ ತಂತ್ರಜ್ಞಾನ

ಇಂದು ಹಂಪಿ ಯುನಿಸ್ಕೋ ಪಾರಂಪರಿಕ ತಾಣವಾಗಿದೆ.

ವಿಜಯನಗರ ಸಾಮ್ರಾಜ್ಯದ ಭೂ ವ್ಯವಸ್ಥೆ 

ವಿಜಯನಗರದಲ್ಲಿ ಭೂಮಿಯೇ ಮುಖ್ಯ ನಗರವಾಗಿತ್ತು. ಆದರೆ ಅದರ ವ್ಯವಸ್ಥೆ ತುಂಬಾ ವ್ಯವಸ್ಥಿತವಾಗಿತ್ತು. 

ಮುಖ್ಯ ಅಂಶಗಳು 

  • ಭೂಮಿಯನ್ನು  ಗುಣಮಟ್ಟದ ಆಧಾರದಲ್ಲಿ ವರ್ಗಿಕರಿಸಲಾಗುತ್ತಿತ್ತು 
  • ಬೆಳೆ ಪ್ರಕಾರ ತೆರಿಗೆ ವಿಧಿಸಲಾಗುತ್ತಿತ್ತು 
  • ಸಾಮಾನ್ಯವಾಗಿ 1/6 ರಿಂದ 1/3 ತೆರಿಗೆ ನೀಡಲಾಗುತ್ತಿತ್ತು

ಅರಣ್ಯ ಮತ್ತು ಕಣಿಜ ಸಂಪನ್ಮೂಲಗಳು 

ವಿಜಯನಗರ ಸಾಮ್ರಾಜ್ಯದಲ್ಲಿ ಅರಣ್ಯ ಮತ್ತು ಖನಿಜಗಳು ದೊಡ್ಡ ಪ್ರಮುಖ ಪಾತ್ರವನ್ನು ವಹಿಸಿದ್ದವು.

  • ಚಂದನದ ಮರದ ಪುಸ್ತಕಗಳು 
  • ಕಬ್ಬಿಣ ಮತ್ತು ತಾಮ್ರದ  ಖನಿಜಗಳು ಇದ್ದವು 
  • ಹೀರೆಗಳ ಗಣಿಗಳು ಕೂಡ ಇದ್ದವು

ಈ ಸಂಪತ್ತು ವಿದೇಶಿ ವ್ಯಾಪಾರಕ್ಕೆ ಉಪಯೋಗವಾಯಿತು

ರಾಜ ತಾಂತ್ರಿಕ ಸಂಬಂಧಗಳು 

ವಿಜಯನಗರ ಸಾಮ್ರಾಜ್ಯವು ಕೇವಲ ಯುದ್ಧಗಳಲ್ಲಿ ಅಲ್ಲ ರಾಜ ತಾಂತ್ರಿಕತೆಯಲ್ಲು ಶಕ್ತಿಶಾಲಿಯಾಗಿತ್ತು.

  • ಪರ್ಷಿಯಾ ಮತ್ತು ಅರಬ್ ರಾಷ್ಟ್ರಗಳೊಂದಿಗೆ ಸಂಪರ್ಕವನ್ನು ಹೊಂದಿತ್ತು 
  • ಕೃಷ್ಣ ದೇವರ ಕಾಲದಲ್ಲಿ ಪೋರ್ಚುಗೀಸರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿತ್ತು
  • ದಕ್ಕನ್ ಸುಲ್ತಾನರೊಂದಿಗೆ ಕೆಲವು ಒಪ್ಪಂದಗಳನ್ನು ಕೂಡ ಮಾಡಿಕೊಂಡಿದ್ದರು
  • ಇವರು ಶತ್ರು ಮಿತ್ರ ನೀತಿಯನ್ನು ಅವಲಂಬಿಸಿದ್ದರು

ನ್ಯಾಯ ವ್ಯವಸ್ಥೆ 

ವಿಜಯನಗರ ಸಾಮ್ರಾಜ್ಯದಲ್ಲಿ ನ್ಯಾಯ ವ್ಯವಸ್ಥೆ ಧರ್ಮಗ ಶಾಸ್ತ್ರಗಳ ಆಧಾರದಲ್ಲಿ ನಡೆದು ಬರುತ್ತಿತ್ತು.

ಲಕ್ಷಣಗಳು 

  • ರಾಜನ ಅಂತಿಮ ನ್ಯಾಯಾಧೀಶ 
  • ಗ್ರಾಮ ಮಟ್ಟದಲ್ಲಿ ಸ್ಥಳೀಯ ಪಂಚಾಯಿತಿ 
  • ಕಠಿಣ ಶಿಕ್ಷೆಗಳು
  • ಕಾನೂನು ಮತ್ತು ಸುವ್ಯವಸ್ಥೆಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿತ್ತು

ಶಿಕ್ಷಣ ವ್ಯವಸ್ಥೆ 

ವಿಜಯನಗರ ಸಾಮ್ರಾಜ್ಯದಲ್ಲಿ ಶಿಕ್ಷಣ ಧಾರ್ಮಿಕ ಮತ್ತು ಸಂಸ್ಕೃತಿಕ  ಸಂಸ್ತೆಗಳ ಮೂಲಕ ನೀಡಲಾಗುತ್ತಿತ್ತು.

  • ಗುರುಕುಲ ಪದ್ಧತಿ 
  • ದೇವಸ್ಥಾನದ ಬಳಿ ಪಾಠಶಾಲೆಗಳು
  • ಸಾಂಸ್ಕೃತಿಕ ಮತ್ತು ಪ್ರಾದೇಶಿಕ ಭಾಷೆಗಳ ಅಧ್ಯಯನ
  • ಬ್ರಾಹ್ಮಣರಿಗೆ ಶಿಕ್ಷಣದಲ್ಲಿ ಅಧಿಕ ಅವಕಾಶ ನೀಡಲಾಗಿತ್ತು

ಪ್ರಮುಖ ಆಡಳಿತ ಅಧಿಕಾರಿಗಳು 

  • ದಂಡ ನಾಯಕ (ಸೈನ್ಯ ಮುಖ್ಯಸ್ಥರು)
  • ಮಹಾ ಪ್ರಧಾನ (ಮುಖ್ಯ ಸಚಿವ)
  • ಆಸ್ತಾನಾಧಿಕಾರಿಗಳು

ಪರಿಸರ ಮತ್ತು ನಗರ ಜೀವನ 

ಹಂಪಿಯ ನಗರದಲ್ಲಿ ಪರಿಸರಕ್ಕೆ ಜಾಗೃತೆಯನ್ನು ಮೂಡಿಸಲಾಗುತ್ತಿತ್ತು. 

  • ನೀರಿನ ಸಂರಕ್ಷಣೆ 
  • ತೋಟಗಳು ಮತ್ತು ಉದ್ಯಾನವನಗಳು 
  • ವಾಸಸ್ಥಳಗಳ ಯೋಜನೆ 
ಪರೀಕ್ಷೆಯಲ್ಲಿ ಕೇಳಬಹುದಾದ ಮುಖ್ಯ ಅಂಶಗಳು 
  • ಸ್ಥಾಪನೆ:1336
  • ಸ್ಥಾಪಕರು: ಹರಿಹರ ಮತ್ತು ಬುಕ್ಕರಾಯ 
  • ರಾಜಧಾನಿ: ಹಂಪಿ 
  • ಪ್ರಮುಖ ರಾಜ: ಕೃಷ್ಣದೇವರಾಯ 
  • ತಾಳೆ ಕೋಟೆಯುದ್ಧ: 1565
  • ಪ್ರಸಿದ್ಧ ವ್ಯವಸ್ಥೆ: ನಯಂಕಾರ ವ್ಯವಸ್ಥೆ

ಕೊನೆಯದಾಗಿ ವಿಜಯನಗರ ಸಾಮ್ರಾಜ್ಯ ಸ್ವರ್ಣಮಯ ರಾಜ್ಯವಾಗಿದ್ದು ಅದರ ಕಲೆ, ಸಂಸ್ಕೃತಿ, ರಾಜಕೀಯಕ್ಕೆ ಬಹಳ ಮಹತ್ವವನ್ನು ಹೊಂದಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ವಿಜಯನಗರ ಸಾಮ್ರಾಜ್ಯದ ಬಗ್ಗೆ ಅತಿ ಹೆಚ್ಚು ಬಾರಿ ಪ್ರಶ್ನೆಗಳನ್ನು ಕೇಳಲಾಗುತ್ತದೆ ಆದ್ದರಿಂದ ಪ್ರತಿಯೊಂದು ಅಂಶಗಳನ್ನು ಅರ್ಥ ಮಾಡಿಕೊಳ್ಳಿ.

ಇನ್ನಷ್ಟು ಓದಿ:https://superstudyiqgk.com/karnataka-gk/

Leave a Comment