RRB ALP 2026 ಆನ್ ಲೈನ್ ಅರ್ಜಿ ಆರಂಭ -11,127 ಹುದ್ದೆಗಳಿಗೆ ಅರ್ಜಿ ಸಲ್ಲಿಸಿ.
ರೈಲ್ವೇ ನೇಮಕಾತಿ ಮಂಡಳಿ (RRB) 2026ರ ಸಹಾಯಕ ಲೋಕೋ ಪೈಲಟ್ (ALP) ಹುದ್ದೆಗಳಿಗೆ ನೇಮಕಾತಿಗೆ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ.
CEN ಸಂಖ್ಯೆ 01/2026 ಅಡಿಯಲ್ಲಿ ಒಟ್ಟು 11,127 ALP ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು rrb apply.gov.in ಅಧಿಕೃತ ವೆಬ್ಸೈಟ್ ಮೂಲಕ ಮೇ 15,2026 ಜೂನ್ 14, 2026 (ರಾತ್ರಿ 11:59ರವರೆಗೆ) ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಇದು 2026 ಅತಿ ದೊಡ್ಡ ರೈಲ್ವೆ ನೇಮಕಾತಿಗಳಲ್ಲಿ ಒಂದಾಗಿದ್ದು, ಮೆಟ್ರಿಕ್ಯೂಲೆಷನ್ (SSLC)+ITI ಅಥವಾ ಡಿಪ್ಲೋಮಾ ಪೂರೈಸಿರುವ ಅಭ್ಯರ್ಥಿಗಳಿಗೆ ಇದು ಒಂದು ಉತ್ತಮ ಅವಕಾಶವಾಗಿದೆ.

RRB ALP 2026 ಪ್ರಮುಖ ದಿನಾಂಕಗಳು
RRB ALP ಅಧಿಸೂಚನೆ ಬಿಡುಗಡೆ -14 ಮೇ 2026
|
RRB ALP 2026ಗೆ ಯಾರು ಅರ್ಹರು?
1) 10ನೇ ತರಗತಿ (SSLC/Matriculation) ಪಾಸ್
2) ITI (NCVT/SCVT) ಪ್ರಮಾಣ ಪತ್ರ
3) ಇಂಜಿನಿಯರಿಂಗ್ ಡಿಪ್ಲೋಮಾ
RRB ALP 2026 ಆನ್ಲೈನ್ ಅರ್ಜಿ ಲಿಂಕ್- https://sl1nk.com/8lr5d5n
RRB ALP 2026 ಪರೀಕ್ಷೆಗೆ ಅಧಿಕೃತ ಸಕ್ರಿಯವಾಗಿದೆ ನೀವು ಮೇಲಿನ ವೆಬ್ ಸೈಟ್ ಗೆ ಹೋಗಿ ಅಪ್ಲಿಕೇಶನ್ ಹಾಕಬಹುದು. ಅಭ್ಯರ್ಥಿಗಳು ಅಧಿಕೃತ ಪೋರ್ಟಲ್ ಮೂಲಕ ತಮ್ಮ ಅರ್ಜಿಯನ್ನು ಭರ್ತಿ ಮಾಡಬೇಕು.
RRB ALP 2026 ಆನ್ಲೈನ್ ಅರ್ಜಿ ಸಲ್ಲಿಸಲು ಅಧಿಕೃತ ವೆಬ್ಸೈಟ್ – rrbapply.gov.in
ಮುಖ್ಯ ಸೂಚನೆ: ನೀವು RRB 2024 ಅಥವಾ 2025 ನೇಮಕಾತಿಗೆ ಈಗಾಗಲೇ ಖಾತೆ (Account) ಹೊಂದಿದ್ದರೆ, ಅದೇ Login Id ಮತ್ತು Password ಬಳಸಿ ಅರ್ಜಿ ಸಲ್ಲಿಸಬೇಕು. ಹೊಸ ಖಾತೆ ತೆರೆಯಬೇಡಿ.
RRB ALP 2026 – 11,127 ಹುದ್ದೆಗಳ ಭರ್ತಿ ಈ ಭಾರಿ ಒಟ್ಟು 11,127 ALP ಹುದ್ದೆಗಳು ಪ್ರಕಟವಾಗಿದ್ದು, ವಿವಿಧ RRB Zone ಗಳಲ್ಲಿ ಹುದ್ದೆಗಳ ಹಂಚಿಕೆ ಮಾಡಲಾಗಿದೆ. ನಿಮ್ಮ ರಾಜ್ಯಕ್ಕೆ ಹತ್ತಿರದ ಹಾಗೂ ಹೆಚ್ಚು ಹುದ್ದೆಗಳು ಇರುವ Zone ಆಯ್ಕೆ ಮಾಡುವುದು ಉತ್ತಮ.
RRB ALP 2026 ಆಯ್ಕೆ ಪ್ರಕ್ರಿಯೆ (Selection Process)
RRB ALP ನೇಮಕಾತಿ ಪ್ರಕ್ರಿಯೆ ಕೆಳಗಿನ ಹಂತಗಳಲ್ಲಿ ನಡೆಯುತ್ತದೆ:
1) CBT-1 (Computer Based Test- ಹಂತ)
ಒಟ್ಟು ಪ್ರಶ್ನೆಗಳು: 75
ಸಮಯ: 60 ನಿಮಿಷಗಳು
Negative marking: ಪ್ರತಿ ತಪ್ಪು ಉತ್ತರಕ್ಕೆ 1/3 ಅಂಕ ಕಡಿತ ಮಾಡುತ್ತಾರೆ.
ವಿಷಯಗಳು:
1) ಗಣಿತ (Mathematics)
2) ಸಾಮಾನ್ಯ ಬುದ್ಧಿ ಮತ್ತೆ ಸಾಮಾನ್ಯ ಬುದ್ಧಿ ಮತ್ತೆ ಮತ್ತು ತಾರ್ಕಿಕತೆ (Reasoning)
3) ಸಾಮಾನ್ಯ ವಿಜ್ಞಾನ (Genaral Science)
4) ಪ್ರಚಲಿತ ಘಟನೆಗಳು (Current Affairs)
2) CBT-2 (Computer Based Test- ಹಂತ)
Part- A: ಗಣಿತ, (Mathematics),ಸಾಮಾನ್ಯ ಬುದ್ಧಿ ಮತ್ತೆ ಮತ್ತು ತಾರ್ಕಿಕತೆ (Reasoning), ಸಾಮಾನ್ಯ ವಿಜ್ಞಾನ (Genaral Science), ಪ್ರಚಲಿತ ಘಟನೆಗಳು (Current Affairs)
PART-B: ಸಂಬಂಧಿತ ಟ್ರೇಡ್ (Trade) ಆಧಾರಿತ ಪ್ರಶ್ನೆಗಳು (ITI/Diploma)
3) CBAT (Computer Based Aptitude Test ALP ಹುದ್ದೆಗೆ ಮಾತ್ರ ಈ ಪರೀಕ್ಷೆ ಇರುತ್ತದೆ.
4) ದಾಖಲೆ ಪರಿಶೀಲನೆ (Document Verification)
ಕೆಳಗಿನ ಡಾಕ್ಯುಮೆಂಟ್ ಗಳನ್ನು ತೆಗೆದುಕೊಂಡು ಹೋಗಬೇಕು.
✅SSLC MARK’S ಕಾರ್ಡ್
✅OBC,EWS,SC,ST INCOME CASTE ಸರ್ಟಿಫಿಕೇಟ್ ಇದರಲ್ಲಿ ನೀವು ಯಾವ ಕೆಟಗರಿಗೆ ಸಂಬಂಧಿಸಿರುತ್ತಿರೋ ಆ ಸರ್ಟಿಫಿಕೇಟ್ ಅನ್ನು ತೆಗೆದುಕೊಂಡು ಹೋಗಿ. ಅಪ್ಲಿಕೇಶನ್ ನಲ್ಲಿ ಹಾಕಿರುವಂತಹ ಸರಿಯಾದ DATA ಇರಬೇಕು ಇಲ್ಲ ಅಂದ್ರೆ ರಿಜೆಕ್ಟ್ ಆಗುತ್ತದೆ.
5) ವೈದ್ಯಕೀಯ ಪರೀಕ್ಷೆ (Medical Examination)
✅ ಕಣ್ಣಿನ ತಪಾಸನೆ ಮಾಡುತ್ತಾರೆ ಅದು A1 STANDARD 6/6 ಇರಬೇಕು. ಕನ್ನಡಕ, ಕಲರ್ ಬ್ಲೈಂಡ್ ನೆಸ್ ಇದ್ದರೆ ವೈದ್ಯಕೀಯ ಪರೀಕ್ಷೆ ರಿಜೆಕ್ಟ್ ಮಾಡುತ್ತಾರೆ. ಅದಕ್ಕೆ ಸರಿಯಾಗಿ ನೋಡಿ ಅಪ್ಲಿಕೇಶನ್ ಹಾಕಿ.
6) RRB ALP 2026 ಅರ್ಜಿ ಶುಲ್ಕ (Application fee)
✅Genaral/OBC – 500
✅SC/ST/ಮಹಿಳೆ/PwBD – 250
ಗಮನಿಸಿ:CBT-1 ಪರೀಕ್ಷೆಗೆ ಹಾಜರಾದ ನಂತರ Genaral/OBC ಅವರಿಗೆ 400 ರೂಪಾಯಿ Refund ಆಗುತ್ತೆ.SC/ST/ಮಹಿಳೆ/PwBD ಅವರಿಗೆ 250 Refund ಆಗುತ್ತೆ.
7) ಅಗತ್ಯ ದಾಖಲೆಗಳು (Require Documents)
ಅರ್ಜಿಯ ಮೊದಲು ಈ ದಾಖಲೆಗಳನ್ನು ಸಿದ್ಧವಾಗಿಟ್ಟುಕೊಳ್ಳಿ:
✅ ಆಧಾರ್ ಕಾರ್ಡ್/ಗುರುತಿನ ಚೀಟಿ
✅SSLC ಅಂಕಪಟ್ಟಿ
✅ITI/Diploma ಪ್ರಮಾಣ ಪತ್ರ
✅ ಜಾತಿ ಪ್ರಮಾಣ ಪತ್ರ (ಅಗತ್ಯವಿದ್ದರೆ)
✅ ಇತ್ತೀಚಿನ ಪಾಸ್ಪೋರ್ಟ್ ಸೈಜ್ ಫೋಟೋ
✅ ಸಹಿ (Signature) ಸ್ಕ್ಯಾನ್ ಕಾಪಿ
✅ ಮೊಬೈಲ್ ಸಂಖ್ಯೆ ಮತ್ತು Email ID
8) RRB ALP 2026 ವೇತನ (Salary)
ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭಿಕ ವೇತನ ಸುಮಾರು:
₹19,000+DA+HRA+ಇತರೆ ಭತ್ಯೆಗಳು
ಒಟ್ಟು ತಿಂಗಳ ವೇತನ ಸುಮಾರು ₹35,000 ರಿಂದ ₹45,000 ವರೆಗೆ ಇರಬಹುದು.
9) ಅರ್ಜಿ ಸಲ್ಲಿಸುವಾಗ ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳು
❌ ತಪ್ಪು Zone ಆಯ್ಕೆ ಮಾಡುವುದು
❌ ಹೆಸರು/DOB ತಪ್ಪಾಗಿ ನಮೂದಿಸುವುದು
❌ ತಪ್ಪು ಫೋಟೋ ಅಥವಾ ಸಹಿ ಅಪ್ಲೋಡ್ ಮಾಡುವುದು
❌ ಕೊನೆಯ ದಿನದವರೆಗೆ ಕಾಯುವುದು
❌ ಹೊಸ ಅಕೌಂಟ್ ತೆರೆಯುವುದು (ಹಳೆಯ RRB Account ಇದ್ದರೆ)
10) ಯಾವ RRB Zone ಆಯ್ಕೆ ಮಾಡುವುದು?
ಹೆಚ್ಚು ಹುದ್ದೆಗಳಿರುವ Zone ಆಯ್ಕೆ ಮಾಡಿದರೆ ಅವಕಾಶ ಹೆಚ್ಚಾಗಬಹುದು
RRB Secunderabad – ಹೆಚ್ಚು ಹುದ್ದೆಗಳು ಇಲ್ಲಿ ಇವೆ.
RRB Banglore – ಕರ್ನಾಟಕ ಅಭ್ಯರ್ಥಿಗಳಿಗೆ ಅನುಕೂಲ
RRB Chenai/Mumbai- ಸ್ಪರ್ಧೆ ಹೆಚ್ಚು ಇರಬಹುದು
11) RRB ALP 2026 ZONE WISE VACANCY

ಈ ಮೇಲಿನ PDF ಬೇಕಾದರೆ ನಮ್ಮ SUPER STUDY IQ GK ಟೆಲಿಗ್ರಾಂ ಅಥವಾ ವಾಟ್ಸಪ್ ಗ್ರೂಪ್ ಗೆ ಜಾಯಿನ್ ಆಗಿ
12) ತಯಾರಿಕೆ ಉಪಯುಕ್ತ ಸಲಹೆಗಳು
✅ ಪ್ರತಿದಿನ 2 ಮಾಕ್ Test ಮಾಡಿ
✅ ಹಿಂದಿನ ವರ್ಷದ ಪ್ರಶ್ನೆ ಪತ್ರಿಕೆ (PYQ) Solve ಮಾಡಿ
✅ Current affairs Revise ಮಾಡಿ
✅CBT-2 Trade questions ಮೇಲೆ focus ಮಾಡಿ
✅ Time management ಅಭ್ಯಾಸ ಮಾಡಿ
13) RRB ALP 2026 ವಯೋಮಿತಿ (Age Limit)
RRB ALP ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವಯಸ್ಸು ಸಾಮಾನ್ಯವಾಗಿ:
ಕನಿಷ್ಠ ವಯಸ್ಸು:18 ವರ್ಷ
ಗರಿಷ್ಠ ವಯಸ್ಸು:30 ವರ್ಷ
ವಯೋಮಿತಿ ಸಡಲಿಕೆ (Age Relaxation):
OBC: 3 ವರ್ಷ
SC/ST: 5 ವರ್ಷ
PwBD: ನಿಯಮಾನುಸಾರ ಹೆಚ್ಚುವರಿ ಸಡಿಲಿಕೆ ಮಾಡುತ್ತಾರೆ.
14) RRB ALP SYLLABUS 2026
ಗಣಿತ (Mathematics)
1) ಶೇಕಡಾವಾರು (percentage)
2) ಲಾಭ ಮತ್ತು ನಷ್ಟ (Profit and Loss)
3) ಸಮಯ ಮತ್ತು ನಿರ್ವಹಣೆ (Time and work)
4) ಸರಳಿಕರಣ (Simplification)
5) Ratio and Proportion
6) Pipe and Sistern ರೈಲ್ವೆ ಸಂಬಂಧಿತ ಪ್ರಶ್ನೆಗಳು
7) Bodomas
8) Geometry
Reasoning (ತಾರ್ಕಿಕ ಬುದ್ಧಿಮತೆ)
1) Analogy
2) Coding and Decoding
3) Blood realation
4) Puzzle
5) Direction Test
6) Seating Arrangement
7) Statement questions
Genaral Science (ಸಾಮಾನ್ಯ ವಿಜ್ಞಾನ)
10ನೇ ತರಗತಿಯ ಸಂಬಂಧಿಸಿದ ವಿಜ್ಞಾನದ ವಿಷಯಗಳು
1) ಭೌತಶಾಸ್ತ್ರ (Physics)
2) ಜೀವಶಾಸ್ತ್ರ (Biology)
3) ರಸಾಯನಶಾಸ್ತ್ರ (Chemistry)
Current affairs (ಪ್ರಚಲಿತ ಘಟನೆಗಳು)
1) ಕ್ರೀಡೆಗಳು
2) ಪ್ರಶಸ್ತಿಗಳು
3) ಸರ್ಕಾರಿ ಯೋಜನೆಗಳು
4) ಪ್ರಮುಖ ಸೂಚ್ಯಂಕಗಳು
5) ಪ್ರಮುಖ ಪ್ರಶಸ್ತಿಗಳು
6) ಪ್ರಮುಖ ಸಂಘಟನೆಗಳು
7) ಬಜೆಟ್ ವಿಶ್ಲೇಷಣೆ
8) ಪ್ರಮುಖ ಯೋಜನೆಗಳು
9) ಪ್ರಚಲಿತ ಯುನಿಸ್ಕೋ ಪಾರಂಪರಿಕ ಪಟ್ಟಿಗಳು
10) ಪ್ರಮುಖ ಆಯ್ಕೆಗಳು
15) RRB ALP ಹಾಲ್ ಟಿಕೆಟ್ (ADMIT CARD 2026)
ಪರೀಕ್ಷೆಗೆ 4-7 ದಿನಗಳ ಮೊದಲು ಅಡ್ಮಿಟ್ ಕಾರ್ಡ್ ಬಿಡುಗಡೆಯಾಗುತ್ತದೆ.
ಅಧಿಕೃತ ವೆಬ್ ಸೈಟ್ ನಲ್ಲಿ login ಮಾಡಿ ಡೌನ್ಲೋಡ್ ಮಾಡುವುದು.
Exam City Slip ಸಾಮಾನ್ಯವಾಗಿ ಪರೀಕ್ಷೆಗೆ 10 ದಿನಗಳ ಮೊದಲು ಬಿಡುಗಡೆಯಾಗುತ್ತದೆ
ನಿಮ್ಮ ಪರೀಕ್ಷೆ ನಗರ, ದಿನಾಂಕ, ಶಿಫ್ಟ್ ಮಾಹಿತಿ ಇದರಲ್ಲಿ ಇರುತ್ತದೆ.
16) RRB ALP ಫಲಿತಾಂಶ (Result)
ಪ್ರತಿ ಹಂತದ ನಂತರ ಆರ್ ಆರ್ ಬಿ ಪ್ರತ್ಯೇಕವಾಗಿ ಪಲಿತಾಂಶ ಪ್ರಕಟಿಸುತ್ತದೆ:
CBT-1 Result
CBT-2 Result
CBAT Result
Final Merit list
RRB ALP 2026 ಮುಖ್ಯ FAQ (Frequently asked Questions)
1) RRB ALP ಅರ್ಜಿ ಯಾವಾಗ ಆರಂಭ ವಾಯಿತು?
ಉತ್ತರ:15 ಮೇ 2026
2) ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವುದು?
ಉತ್ತರ: 14 ಜೂನ್ 2026 (11:59 PM)
3) ಒಟ್ಟು ಎಷ್ಟು ಹುದ್ದೆಗಳು ಇವೆ?
ಉತ್ತರ: 11,127 ಹುದ್ದೆಗಳು
4) ITI ಇಲ್ಲದೇ ಅಪ್ಲೈ ಮಾಡಬಹುದೇ?
ಉತ್ತರ: ಕೆಲವು ಡಿಪ್ಲೋಮಾ ಅರ್ಹತೆಗಳೊಂದಿಗೆ ಸಾಧ್ಯ;ಅಧಿಸೂಚನೆ ನೋಡಿ.
5) ಒಂದಕ್ಕಿಂತ ಹೆಚ್ಚು zone ಅಪ್ಲೈ ಮಾಡಬಹುದೇ?
ಉತ್ತರ: ಸಾಮಾನ್ಯವಾಗಿ ಒಂದು ಅರ್ಜಿಯನ್ನು ಆಯ್ಕೆ ಮಾಡಬೇಕು; ಅಧಿಕೃತ ನಿಯಮ ನೋಡಿ.
6) ಮೆಡಿಕಲ್ A1 ಸ್ಟ್ಯಾಂಡರ್ಡ್ ಇರಬೇಕೆ?
ಉತ್ತರ: ಹೌದು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ನಿಯಮ ನೋಡಿ
7) ಯಾವ zone ಅತಿ ಹೆಚ್ಚು cutoff ನಿಲ್ಲುತ್ತದೆ ಹೇಳಿ?
ಉತ್ತರ: ಕಮೆಂಟ್ ಮೂಲಕ ತಿಳಿಸಿ
8) ಯಾವ zone ಅತಿ ಕಡಿಮೆ cutoff ನಿಲ್ಲುತ್ತದೆ ಹೇಳಿ?
ಉತ್ತರ: ಕಮೆಂಟ್ ಮೂಲಕ ತಿಳಿಸಿ

ಗಮನಿಸಿ: ಅಪ್ಲಿಕೇಶನ್ ಅನ್ನು ಆದಷ್ಟು ಬೇಗ ಮೊದಲ 10 ದಿನಗಳಲ್ಲಿ ಹಾಕಿ ಕೊನೆಯ ದಿನಗಳಲ್ಲಿ ಸರ್ವರ್ BUSY ಕಾರಣ ಇರುವುದರಿಂದ ಅಪ್ಲಿಕೇಶನ್ ರಿಜೆಕ್ಟ್ ಆಗುವ ಸಂದರ್ಭ ಇರುತ್ತದೆ ಆದಕಾರಣ ಬೇಗ ಅಪ್ಲಿಕೇಶನ್ ಹಾಕಿ.
| 1) ಅರ್ಜಿ ಸಲ್ಲಿಸುವ ವೆಬ್ ಸೈಟ್ ಲಿಂಕ್ | https://sl1nk.com/8lr5d5n |
| 2)ನೋಟಿಫಿಕೇಶನ್ ಲಿಂಕ್ | https://t.me/study192/2640 |
| 3) ಹೆಚ್ಚಿನ ಮಾಹಿತಿ ಮತ್ತು ವಿಡಿಯೋಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | https://l1nk.dev/km4j5z8 |