Telegram Join My Telegram   WhatsApp Join My WhatsApp

ಮೇ 2ರ ಪ್ರಚಲಿತ ಘಟನೆಗಳು 2026 (CURRENT AFFAIRS 02-05-2026)

Spread the love

ದೈನಂದಿನ ಪ್ರಚಲಿತ ಘಟನೆಗಳ ಕ್ವಿಜ್ – 2ನೇ ಮೇ 2026

ಬ್ಯಾಂಕಿಂಗ್,SSC,RRB,ARMY,PC,PSI,SDA,FDA ಹಾಗೂ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ

ಇಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಚಲಿತ ಘಟನೆಗಳು (Current Affairs) ಅತ್ಯಂತ ಮಹತ್ವವಾಗಿದೆ. ಈ ಕ್ವಿಜ್ ಮೂಲಕ ನೀವು ನಿಮ್ಮ ಧ್ಯಾನವನ್ನು ಪರೀಕ್ಷಿಸಬಹುದು, ವೇಗ ಮತ್ತು ನಿಖರತೆಯನ್ನು ಹೆಚ್ಚಿಸಬಹುದು. ಕೆಳಗಿನ ಪ್ರಶ್ನೆಗಳು 2ನೇ ಮೇ 2026ರ ಪ್ರಮುಖ ಘಟನೆಗಳ ಆಧಾರಿತವಾಗಿದೆ.

ಪ್ರಶ್ನೆ 1) 57ನೇ ಅಂತರಾಷ್ಟ್ರೀಯ ಭಾರತೀಯ ಚಲನಚಿತ್ರೋತ್ಸವ (IFFI) ಗೆ ಫೆಸ್ಟಿವಲ್ ಡೈರೆಕ್ಟರ್ ಆಗಿ ಯಾರನ್ನು ನೇಮಕ ಮಾಡಲಾಗಿದೆ?

A) ಹರ್ಷವರ್ಧನ್ ಸೂರಿ

B) ರಾಮನಾಥ್ ಭಟ್

C) ಅಶುತೋಷ ಗೋವಾರಿಕರ್

D) ಶ್ಯಾಮ ಪ್ರಸಾದ್ ಕೃಷ್ಣವರ್ಮ

ಸರಿಯಾದ ಉತ್ತರ: C) ಅಶುತೋಷ ಗೋವಾರಿಕರ್

ವಿವರಣೆ: ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಖ್ಯಾತ ನಿರ್ದೇಶಕರು ಅಶುತೋಷ ಗೋವಾರಿಕರ್  ಅವರನ್ನು 57ನೇ IFFI ಗೆ ಫೆಸ್ಟಿವಲ್ ಡೈರೆಕ್ಟರ್ ಆಗಿ ನೇಮಕ ಮಾಡಿದೆ. ಈ ಉತ್ಸವವು ಗೋವಾದಲ್ಲಿ ನಡೆಯಲಿದೆ. ಭಾರತೀಯ ಸಿನಿಮಾಕ್ಕೆ ಅವರು ನೀಡಿರುವ ಕೊಡುಗೆಗಳು ಬಹಳ ಅಪಾರವಾಗಿವೆ. ಈ ನೇಮಕಾತಿಯ ಮೂಲಕ ಉತ್ಸವದ ಅಂತರಾಷ್ಟ್ರೀಯ ಮಟ್ಟವನ್ನು ಮತ್ತಷ್ಟು ಬಲಪಡಿಸು ಉದ್ದೇಶ ಹೊಂದಲಾಗಿದೆ.

ಪ್ರಶ್ನೆ 2) ಭಾರತದ ಮೊದಲ Multi-Lane Free Flow (MLFF) ಟೋಲ್ ವ್ಯವಸ್ಥೆಯನ್ನು ಯಾವ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಾರಂಭಿಸಲಾಗಿದೆ?

A) NH-45

B) NH-18

C) NH-16

D) NH-48

ಸರಿಯಾದ ಉತ್ತರ: D) NH-48

ವಿವರಣೆ: ಭಾರತದಲ್ಲಿ ಮೊದಲ ಬಾರಿಗೆ MLFF (Barrier-less Tolling System) ಅನ್ನೋ ಗುಜರಾತ್ ನ ಸೂರತ್ – ಭರುಚ್ ವಿಭಾಗದ NH-48 ನಲ್ಲಿ ಪರಿಚಯಿಸಲಾಗಿದೆ. ಇದು ವಾಹನಗಳನ್ನು ನಿಲ್ಲಿಸದೆ ಟೋಲ್ ವಸೂಲಿ ಮಾಡುವ ವ್ಯವಸ್ಥೆಯಾಗಿದೆ.ANPR ಮತ್ತು FASTag ತಂತ್ರಜ್ಞಾನವನ್ನು ಬಳಸುತ್ತದೆ. ಇದರಿಂದ ಟ್ರಾಫಿಕ್ ಸಮಸ್ಯೆ ಕಡಿಮೆಯಾಗುತ್ತದೆ ಮತ್ತು ಇಂಧನ ಉಳಿತಾಯವಾಗುತ್ತದೆ.

ಪ್ರಶ್ನೆ 3) MSME ಸಚಿವಾಲಯದ ಕಾರ್ಯದರ್ಶಿಯಾಗಿ ಯಾರನ್ನು ನೇಮಕ ಮಾಡಲಾಗಿದೆ?

A) ಭಾರತ್ ಖೇರಾ

B) ರಾವಣ ಭಟ್

C) ಜೋಶಿ ಕೃಷ್ಣಮೂರ್ತಿ

D) ಅನನ್ಯ ಭಟ್

ಸರಿಯಾದ ಉತ್ತರ: A) ಭಾರತ್ ಖೇರಾ

ವಿವರಣೆ: 2026 ರ ಮೇ ತಿಂಗಳಲ್ಲಿ ಭಾರತ ಖೇರಾ ಅವರು MSME ಸಚಿವಾಲಯದ ಕಾರ್ಯದರ್ಶಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಸಣ್ಣ, ಮಧ್ಯಮ ಉದ್ಯಮಗಳನ್ನು ಉತ್ತೇಜಿಸುವಲ್ಲಿ ಈ ಸಚಿವಾಲಯ ಪಾತ್ರ ಬಹಳ ಅಪಾರವಾಗಿದೆ.

ಪ್ರಶ್ನೆ 4) ಸಂಪೂರ್ಣ ಕಾಗದರಹಿತ ನ್ಯಾಯಾಂಗವನ್ನು ಹೊಂದಿದ ಭಾರತದ ಮೊದಲ ರಾಜ್ಯ ಯಾವುದು?

A) ಸಿಕ್ಕಿಂ

B) ಬಿಹಾರ್

C) ಕೇರಳ

D) ತಮಿಳುನಾಡು

ಸರಿಯಾದ ಉತ್ತರ: A) ಸಿಕ್ಕಿಂ

ವಿವರಣೆ: ಭಾರತದ ಮೊದಲ ಪೇಪರ್ ಲೆಸ್ ಜ್ಯೂಡಿಸಿಯರಿ ರಾಜ್ಯವನ್ನಾಗಿ ಸಿಕ್ಕಿಂ ಅನ್ನು ಘೋಷಿಸಲಾಗಿದೆ. ಈ ಘೋಷಣೆಯನ್ನು ನ್ಯಾಯಮೂರ್ತಿ ಸೂರ್ಯಕಾಂತ ಅವರು ಗ್ಯಾಂಗ್ ಟಾಕ್ ನಲ್ಲಿ ನಡೆದ ಸಮಾವೇಶದಲ್ಲಿ ಇವರು ಪ್ರಕಟಿಸುತ್ತಾರೆ. ಇದು ಡಿಜಿಟಲ್ ಇಂಡಿಯಾದ ದೃಷ್ಟಿಕೋನದ ಪ್ರಮುಖ ಹೆಜ್ಜೆಯಾಗಿದೆ.

ಪ್ರಶ್ನೆ 5) 2026ರ ಮೇ ಡೇ ಥೀಮ್ ಏನು?

A) ಆರೋಗ್ಯದ ಅಭಿವೃದ್ಧಿ

B) ಆರೋಗ್ಯಕರ ಮನೋವೈಜ್ಞಾನಿಕ ಕೆಲಸದ ಪರಿಸರ

C) ಆರೋಗ್ಯಕ್ಕಾಗಿ ಜೀವನ

D) ಜೀವನಕ್ಕಾಗಿ ದುಡಿಮೆ

ಸರಿಯಾದ ಉತ್ತರ: B) ಆರೋಗ್ಯಕರ ಮನೋವೈಜ್ಞಾನಿಕ ಕೆಲಸದ ಪರಿಸರ

ವಿವರಣೆ: ಪ್ರತಿ ವರ್ಷ ಮೇ 1ರಂದು ಆಚರಿಸಲ್ಪಡುವ ಕಾರ್ಮಿಕರ ದಿನದ 2026ರ ಥೀಮ್ Ensuring a Healthy Psychosocial Working Environment ಆಗಿದೆ. ಈ ದಿನವು ಕಾರ್ಮಿಕರ ಹಕ್ಕುಗಳು, ಅವರ ಕೊಡುಗೆಗಳು ಮತ್ತು ಸಮಾಜದ ಅಭಿವೃದ್ಧಿಯಲ್ಲಿ ಅವರ ಪಾತ್ರವನ್ನು ಗೌರವಿಸುತ್ತವೆ.

ಪ್ರಶ್ನೆ 6) ಏಪ್ರಿಲ್ 2026ರಲ್ಲಿ ಭಾರತದಲ್ಲಿ ದಾಖಲಾಗಿದೆ ಗರಿಷ್ಠ GST ಸಂಗ್ರಹ ಎಷ್ಟು?

A) 2.22 ಲಕ್ಷ ಕೋಟಿ

B) 2.42 ಲಕ್ಷ ಕೋಟಿ

C) 5.25 ಲಕ್ಷ ಕೋಟಿ

D) 3.25 ಲಕ್ಷ ಕೋಟಿ

ಸರಿಯಾದ ಉತ್ತರ: B) 2.42 ಲಕ್ಷ ಕೋಟಿ

ವಿವರಣೆ: ಭಾರತದಲ್ಲಿ ಏಪ್ರಿಲ್ 2026ರಲ್ಲಿ 2.42 ಲಕ್ಷ ಕೋಟಿ  GST ಸಂಗ್ರಹ ದಾಖಲಾಗಿದೆ ಅಂತ ಹೇಳಬಹುದು. ಇದು ಹಿಂದಿನ ವರ್ಷಕ್ಕಿಂತ 8.7% ಹೆಚ್ಚಾಗಿದೆ. ಇದು ದೇಶದ ಆರ್ಥಿಕ ಚಟುವಟಿಕೆಗಳು ಉತ್ತಮವಾಗಿರುವುದನ್ನು ಸೂಚಿಸುತ್ತದೆ.

ಪ್ರಶ್ನೆ 7) Khuarel ಆಪ್ ಅನ್ನು ಯಾವ ರಾಜ್ಯ ಬಿಡುಗಡೆ ಮಾಡಿದೆ?

A) ಮಿಜೋರಾo

B) ಕೇರಳ

C) ಕರ್ನಾಟಕ

D) ರಾಜಸ್ತಾನ್

ಸರಿಯಾದ ಉತ್ತರ: A) ಮಿಜೋರಾo

ವಿವರಣೆ: ಮಿಜೋರಾo ರಾಜ್ಯವು Khuarel ಮೊಬೈಲ್ ಅಪ್ಲಿಕೇಶನ್ ಅನ್ನು ಬಿಡುಗಡೆ ಮಾಡಿದೆ. ಇದು ಪ್ರಕೃತಿ ವಿಕೋಪ ಸಂದರ್ಭದಲ್ಲಿ ತ್ವರಿತ ಮಾಹಿತಿ ವಿನಿಮಯ ಮತ್ತು ನಿರ್ವಹಣೆಗೆ ಸಹಾಯವನ್ನು ಮಾಡುತ್ತದೆ.

ಪ್ರಶ್ನೆ 8) RBI ನಿಯಮಾನುಸಾರ NBFC ಗಳಿಗೆ ನೊಂದಣಿ ವಿನಾಯಿತಿ ನೀಡುವ ಮಿತಿ ಎಷ್ಟು?

A) 2000 ಕೋಟಿ

B) 6000 ಕೋಟಿ

C) 1000 ಕೋಟಿ

D) 500 ಕೋಟಿ

ಸರಿಯಾದ ಉತ್ತರ: C) 1000 ಕೋಟಿ

ವಿವರಣೆ: 1000 ಕೋಟಿಗಿಂತ ಕಡಿಮೆ ಆಗ್ತಿ ಹೊಂದಿರುವ Non- deposit NBFCಗಳಿಗೆ RBI ನೊಂದಣಿ ವಿನಾಯಿತಿ ನೀಡಿದೆ ಅಂತ ಹೇಳಬಹುದು. ಇದು ಜುಲೈ 2026 1 ರಿಂದ ಜಾರಿಗೆ ಬರಲಿದೆ.

ಪ್ರಶ್ನೆ 9) INS ಮಹೇಂದ್ರ ಗಿರಿಯನ್ನು ಯಾವ ಸಂಸ್ಥೆ ನಿರ್ಮಿಸಿದೆ?

A) ಸಿಡ್ನಿ ಬಿಲ್ಡರ್ ಲಿಮಿಟೆಡ್

B) ಹರಿಕೆನ್ ಬಿಲ್ಡರ್ ಲಿಮಿಟೆಡ್

C) ಮಜಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್

D) ಬಿಲ್ಲಿ ಡೆಕ್ಕನ ಬಿಲ್ಡರ್ ಲಿಮಿಟೆಡ್

ಸರಿಯಾದ ಉತ್ತರ: C) ಮಜಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್

ವಿವರಣೆ:INS ಮಹೇಂದ್ರ ಗಿರಿ (Project 17A) ಯನ್ನು ಮುಂಬೈನ ಮಜಗಾನ್ ಡಾಕ್ ಶಿಪ್ ಬಿಲ್ಡರ್ ಲಿಮಿಟೆಡ್ ನಿರ್ಮಿಸಿದ ಅಂತ ಹೇಳಬಹುದು. ಇದು ಆಧುನಿಕ ಯುದ್ಧ ನೌಕೆಯಾಗಿದ್ದು, ಸಮುದ್ರ ರಕ್ಷಣೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ.

ಪ್ರಶ್ನೆ 10) ಭಾರತ – ತಾಂಜಾನಿಯಾ ನಡುವಿನ ವ್ಯಾಪಾರದ ಮೌಲ್ಯ (2025-26) ಎಷ್ಟು?

A) USD 7.02 ಬಿಲಿಯನ್

B) USD 9.02 ಬಿಲಿಯನ್

C) USD 5.06 ಬಿಲಿಯನ್

D) USD 8.36 ಬಿಲಿಯನ್

ಸರಿಯಾದ ಉತ್ತರ: B) USD 9.02 ಬಿಲಿಯನ್

ವಿವರಣೆ: 2025-26 ಭಾರತ ಮತ್ತು ತಾಜಾನಿಯ ನಡುವಿನ ವ್ಯಾಪಾರ ಮೌಲ್ಯ ಭಾರತ ಮತ್ತು ತಾಂಜಾನಿಯಾ ನಡುವಿನ ವ್ಯಾಪಾರ ಮೌಲ್ಯ USD 9.02 ಬಿಲಿಯನ್ ಆಗಿದೆ ಅಂತ ಹೇಳಬಹುದು. ಇದು ಎರಡು ದೇಶಗಳ ಆರ್ಥಿಕ ಸಹಕಾರವನ್ನು ತೋರಿಸುತ್ತದೆ.

ಪ್ರಶ್ನೆ 11) 2026 ರಲ್ಲಿ ಭಾರತದ ಆರ್ಥಿಕ ಬೆಳವಣಿಗೆ ದರವನ್ನು ಅಂದಾಜಿಸಿದ ಸಂಸ್ಥೆ ಯಾವುದು?

A) ವಿಶ್ವ ಬ್ಯಾಂಕ್

B) ಯುನೆಸ್ಕೋ ವರ್ಲ್ಡ್ ಹೆರಿಟೇಜ್

C) ವರ್ಲ್ಡ್ ಹೆಲ್ತ್ ಆರ್ಗನೈಸೇಷನ್

D) ಅಂತರಾಷ್ಟ್ರೀಯ ಹಣಕಾಸು ನಿಧಿ (IMF)

ಸರಿಯಾದ ಉತ್ತರ: D) ಅಂತರಾಷ್ಟ್ರೀಯ ಹಣಕಾಸು ನಿಧಿ (IMF)

ವಿವರಣೆ: IMF ತನ್ನ ವರದಿಯಲ್ಲಿ ಭಾರತದ GDP ಬೆಳವಣಿಗೆಯನ್ನು ವಿಶ್ವದಲ್ಲಿ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿ ಗುರುತಿಸಿಕೊಂಡಿದೆ.

ಪ್ರಶ್ನೆ 12) ಇತ್ತೀಚೆಗೆ ಯಾವ ದೇಶವು ಡಿಜಿಟಲ್ ಕರೆನ್ಸಿ (CBDC) ಅನ್ನು ಅಧಿಕೃತವಾಗಿ ಪ್ರಾರಂಭಿಸಿದೆ?

A) ಆಸ್ಟ್ರೇಲಿಯಾ

B) ಭಾರತ

C) ಜರ್ಮನಿ

D) ಚೀನಾ

ಸರಿಯಾದ ಉತ್ತರ:D) ಚೀನಾ

ವಿವರಣೆ: ಚೀನಾ ತನ್ನ ಡಿಜಿಟಲ್ ಯುವಾನ್ (E-CNY) ಮೂಲಕ ಡಿಜಿಟಲ್ ಕರೆನ್ಸಿಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದೆ. ಇದು ಭವಿಷ್ಯದ ಬ್ಯಾಂಕಿಂಗ್ ವ್ಯವಸ್ಥೆಗೆ ಮಹತ್ವದ ಹೆಜ್ಜೆ ಅಂತ ಹೇಳಬಹುದು.

ಪ್ರಶ್ನೆ 13) 2026ರಲ್ಲಿ Global Wind day ಯಾವ ದಿನ ಆಚರಿಸಲಾಗುತ್ತದೆ?

A) ಜೂನ್ 15

B) ಮಾರ್ಚ್ 5

C) ಏಪ್ರಿಲ್ 8

D) ನವೆಂಬರ್ 14

ಸರಿಯಾದ ಉತ್ತರ: A) ಜೂನ್ 15

ವಿವರಣೆ: ಇದು ಪವನ ಶಕ್ತಿಯ ಮಹತ್ವವನ್ನು ತಿಳಿಸಲು ಈ ದಿನವನ್ನು ಆಚರಿಸಲಾಗುತ್ತದೆ ಅಂತ ಹೇಳಬಹುದು.

ಪ್ರಶ್ನೆ 14) ಆಪರೇಷನ್ ದೋಸ್ತ್ ಯಾವ ದೇಶಕ್ಕೆ ಸಂಬಂಧಿಸಿದೆ?

A) ಆಸ್ಟ್ರೇಲಿಯಾ ಮತ್ತು ಭಾರತ

B) ಟರ್ಕಿ ಮತ್ತು ಸಿರಿಯಾ

C) ಚೀನಾ ಮತ್ತು ಜಪಾನ

D) ಇಸ್ರೇಲ್ ಮತ್ತು ಇರಾನ್

ಸರಿಯಾದ ಉತ್ತರ:B) ಟರ್ಕಿ ಮತ್ತು ಸಿರಿಯಾ

ವಿವರಣೆ: ಭೂಕಂಪದ ನಂತರ ಭಾರತ ನಡೆಸಿದ ರಕ್ಷಣಾ ಕಾರ್ಯಾಚರಣೆಗೆ ಆಪರೇಷನ್ ದೋಸ್ತ್ ಎಂದು ಹೆಸರು ನೀಡಲಾಗಿದೆ.

15) 57ನೇ IFFI ಗೆ ಫೆಸ್ಟಿವಲ್ ಡೈರೆಕ್ಟಾಗಿ ನೇಮಕಗೊಂಡ ಅಶುತೋಷ್ ಗೋವಾರಿಕರ್ ಯಾವ ಕ್ಷೇತ್ರಕ್ಕೆ ಸಂಬಂಧಿಸಿದವರು?

A) ಸಂಗೀತಗಾರ

B) ಲಾಯರ್

C) ಚಲನಚಿತ್ರ ನಿರ್ದೇಶಕ (Film Director)

D) ರಾಜಕಾರಣಿ

ಸರಿಯಾದ ಉತ್ತರ: C) ಚಲನಚಿತ್ರ ನಿರ್ದೇಶಕ (Film Director)

ವಿವರಣೆ: ಅವರು ಬಾಲಿವುಡ್ ನ ಪ್ರಮುಖ ನಿರ್ದೇಶಕರಲ್ಲಿ ಒಬ್ಬರು ಮತ್ತು ಇತಿಹಾಸಧಾರಿತ ಹಾಗೂ ಸಾಮಾಜಿಕ ವಿಷಯಗಳ ಚಿತ್ರಗಳಿಗೆ ಇವರು ಪ್ರಸಿದ್ಧರಾಗಿದ್ದಾರೆ.

16) ಏಪ್ರಿಲ್ 2026 ರಲ್ಲಿ IGST ಸಂಗ್ರಹ ಸುಮಾರು ಎಷ್ಟು ದಾಖಲಾಗಿದೆ?

A) 2.36 ಲಕ್ಷ ಕೋಟಿ

B) 1.29 ಲಕ್ಷ ಕೋಟಿ

C) 5.36 ಲಕ್ಷ ಕೋಟಿ

D) 2.52 ಲಕ್ಷ ಕೋಟಿ

ಸರಿಯಾದ ಉತ್ತರ: B) 1.29 ಲಕ್ಷ ಕೋಟಿ

ವಿವರಣೆ: ಒಟ್ಟು GST ಸಂಗ್ರಹದಲ್ಲಿ IGST ಪ್ರಮುಖ ಹಂಚಿಕೆಯನ್ನು ಹೊಂದಿದೆ.

ಪ್ರಶ್ನೆ 17)  ಸ್ಟೇಲ್ತ್ ಪ್ರಿಗೇಟ್ ಇದು ಯಾವುದಕ್ಕೆ ಸಂಬಂಧಿಸಿದೆ?

A) ಯುದ್ಧ ಹಡಗು

B) ಯುದ್ಧ ವಿಮಾನ

C) ಯುದ್ಧ ನೌಕೆ

D) ಯುದ್ಧ ರಾಕೆಟ್

ಸರಿಯಾದ ಉತ್ತರ: C) ಯುದ್ಧ ನೌಕೆ

ವಿವರಣೆ: ಇದು ಆಧುನಿಕ ತಂತ್ರಜ್ಞಾನ ಹೊಂದಿದ್ದು ಸಮುದ್ರದ ರಕ್ಷಣೆಗೆ ಇದನ್ನ ಬಳಸಲಾಗುತ್ತದೆ ಅಂತ ಹೇಳಬಹುದು.

ಈ ದೈನಂದಿನ ಕ್ವಿಜ್ ಮೂಲಕ ನೀವು:

✓ ಪ್ರಚಲಿತ ಘಟನೆಗಳ ಬಗ್ಗೆ ಸ್ಪಷ್ಟ ಜ್ಞಾನ ಪಡೆಯಬಹುದು

✓ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಗಳಿಸಲು ಸಹಾಯವಾಗುತ್ತದೆ

✓ ಈ ಪ್ರಶ್ನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುವ ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿರುತ್ತದೆ.

ಇನ್ನಷ್ಟುಓದಿ:https://superstudyiqgk.com/category/%e0%b2%aa%e0%b3%8d%e0%b2%b0%e0%b2%9a%e0%b2%b2%e0%b2%bf%e0%b2%a4-%e0%b2%98%e0%b2%9f%e0%b2%a8%e0%b3%86%e0%b2%97%e0%b2%b3%e0%b3%81/

Leave a Comment