Telegram Join My Telegram   WhatsApp Join My WhatsApp

ಮೇ 03 ಪ್ರಚಲಿತ ಘಟನೆಗಳು-2026 (CURRENT AFFAIRS IN KANNADA)

Spread the love

ಮೇ 03 ಪ್ರಚಲಿತ ಘಟನೆಗಳು MCQ QUESTIONS AND ANSWERS IN KANNADA.

ಈ ಪ್ರಚಲಿತ ಘಟನೆಗಳು SSC,RRB, PC, PSI, SDA, FDA, UPSC, BANKING ಪರೀಕ್ಷೆಗಳಿಗೆ ತಯಾರಿ ಮಾಡುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಪ್ರಶ್ನೆಗಳು ಉಪಯುಕ್ತವಾಗಿರುತ್ತದೆ. 

1) ಪ್ರತಿವರ್ಷ ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಯಾವಾಗ ಆಚರಿಸಲಾಗುತ್ತದೆ? 

A) ಮೇ 5 

B) ಮೇ 1 

C) ಜೂನ್ 5

D) ಏಪ್ರಿಲ್ 8 

ಸರಿಯಾದ ಉತ್ತರ: B) ಮೇ 1 

ವಿವರಣೆ: ಕಾರ್ಮಿಕರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರ ಶ್ರಮವನ್ನು ಗೌರವಿಸಲು ಪ್ರತಿ ವರ್ಷ ಮೇ 1 ರಂದು ಅಂತರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. 

2)  ಪ್ರಾಜೆಕ್ಟ್ 17A ಅಡಿಯಲ್ಲಿ ನಿರ್ಮಿಸಲಾದ ಯಾವ ಸುಧಾರಿತ ಸ್ಟೆಲ್ತ ಪ್ರೀಗೆ ಟ್ ಅನ್ನು ಇತ್ತೀಚಿಗ ಭಾರತೀಯ ನೌಕಾಪಡೆ ಸೇರಿಸಲಾಗಿದೆ?

A) ಐಎನ್ಎಸ್ ವಿಕ್ರಾಂತ್ 

B) ಐಎನ್‌ಎಸ್ ತಾರಗಿರಿ 

C) ಮಹೇಂದ್ರ ಗಿರಿ 

D) ಐಎನ್ಎಸ್ ಗುರು 

ಸರಿಯಾದ ಉತ್ತರ: C) ಮಹೇಂದ್ರ ಗಿರಿ 

ವಿವರಣೆ: ಮಹೇಂದ್ರಗಿರಿ ಎಂಬುದು ಪ್ರಾಜೆಕ್ಟ್ 17A ಅಡಿಯಲ್ಲಿ ನಿರ್ಮಿಸಲಾದ 7ನೇ ಮತ್ತು ಕೊನೆಯ ಸ್ಟೆಲ್ತ ಪ್ರೀಗೆಟ್ ಆಗಿದೆ. ಇದನ್ನು ಮುಂಬೈನ ಮಜಗಾಂವ ಡಾಕ್ ಶಿಪ್ ಬಿಲ್ಡರ್  ಲಿಮಿಟೆಡ್ ನಲ್ಲಿ ನಿರ್ಮಿಸಲಾಗಿದೆ ಅಂತ ಹೇಳಬಹುದು.

3) 2026ರ ವಿಟ್ಲಿ ಪ್ರಶಸ್ತಿಯನ್ನು (Whitley Award) ಪಡೆದ ಪರ್ವೀನ್ ಶೇಖ್ ಅವರು ಯಾವ ಪಕ್ಷಿಯ ಸಂರಕ್ಷಣೆಗಾಗಿ ಕೆಲಸ ಮಾಡಿದ್ದಾರೆ?

A) ಗ್ರೇಟ್ ಇಂಡಿಯನ್ ಬಸ್ಟರ್ಡ್ 

B) ಇಂಡಿಯನ್ ಸ್ಕಿಮ್ಮರ್

C) ಗುಬ್ಬಚ್ಚಿ 

D) ಬಿಳಿ ಬೆನ್ನಿನ ಹದ್ದು 

ಸರಿಯಾದ ಉತ್ತರ: B) ಇಂಡಿಯನ್ ಸ್ಕಿಮ್ಮರ್

ವಿವರಣೆ: ಪರ್ವೀನ್ ಶೇಖ್ ಅವರಿಗೆ ಇಂಡಿಯನ್ ಸ್ಕಿಮ್ಮರ್ ಪಕ್ಷಿಗಳ ಸಂರಕ್ಷಣೆಯಲ್ಲಿ ಅವರು ಮಾಡಿದ ಮಹೋನ್ನತ ಕಾರ್ಯಕ್ಕಾಗಿ ಪರಿಸರ ಕ್ಷೇತ್ರದ ಪ್ರತಿಷ್ಠಿತ ವಿಟ್ಲಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. 

4) ವಿಶ್ವದ ಮೊದಲ ಶೂನ್ಯ ಹೊರಸೂಸುವಿಕೆ ಕಲ್ಲಿದ್ದಲು ಬ್ಯಾಟರಿಯನ್ನು ಅಭಿವೃದ್ಧಿಪಡಿಸಿದ ದೇಶ ಯಾವುದು?

A) ಭಾರತ 

B) ಅಮೆರಿಕ 

C) ಪಾಕಿಸ್ತಾನ 

D) ಚೀನಾ 

ಸರಿಯಾದ ಉತ್ತರ: D) ಚೀನಾ 

ವಿವರಣೆ: ವಾಯು ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶದಿಂದ ಚೀನಾ ದೇಶವು ಇತ್ತೀಚಿಗೆ ಕಲ್ಲಿದ್ದಲನ್ನು ಬಳಸಿದರೂ ಶೂನ್ಯ ಹೊರ ಸೂಸುವಿಕೆ ಹೊಂದಿರುವ ಬ್ಯಾಟರಿ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದೆ ಅಂತ ಹೇಳಬಹುದು. 

5) ವಿಪತ್ತು ನಿರ್ವಹಣೆಗಾಗಿ ಖುವಾರಲ್ (Khural) ಮೊಬೈಲ್ ಆಪ್ ಬಿಡುಗಡೆ ಮಾಡಿದ ರಾಜ್ಯ ಯಾವುದು? 

A) ಅಸ್ಸಾಂ 

B) ಮಣಿಪುರ 

C) ಮಿಜೋರಾo

D) ಬಿಹಾರ್ 

ಸರಿಯಾದ ಉತ್ತರ: C) ಮಿಜೋರಾo

ವಿವರಣೆ: ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಜನರಿಗೆ ತ್ವರಿತವಾಗಿ ಮಾಹಿತಿ ನೀಡಲು ಮತ್ತು ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಲು ಮಿಜೋರಾಂ ಸರ್ಕಾರ ಈ ಆಪ್ ಅನ್ನ ಹೊರತಂದಿದೆ. 

6) ವಿಕ್ರಮ್ VT 21 ಎಂಬ ಯೋಜನೆಯನ್ನು ಪ್ರಾರಂಭಿಸಿದ ಸಂಸ್ಥೆ ಯಾವುದು? 

A) ಇಸ್ರೋ 

B) BHEL

C) HAL

D) DRDO

ಸರಿಯಾದ ಉತ್ತರ: D) DRDO

ವಿವರಣೆ: ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತನ್ನ ರಕ್ಷಣಾ ಸಾಮರ್ಥ್ಯವನ್ನು ಹೆಚ್ಚಿಸುವ ಭಾಗವಾಗಿ ವಿಕ್ರಮ್ VT 21 ಯೋಜನೆಯನ್ನು ಕೈಗೆತ್ತಿಕೊಂಡಿದೆ. 

7)ಇತ್ತೀಚೆಗೆ ಸುದ್ದಿಯಲ್ಲಿದ್ದ E-PRAAPTI   ಡಿಜಿಟಲ್ ಫ್ಲಾಟ್ ಫಾರ್ಮ್ ಯಾವ ಉದ್ದೇಶಕ್ಕಾಗಿ ಬಳಕೆಯಾಗುತ್ತಿದೆ? 

A) EPFO ಸೇವೆಗಳು 

B) ರೈಲ್ವೆ ಟಿಕೆಟ್ ಬುಕಿಂಗ್ 

C) ಶಿಕ್ಷಣದ ನೇಮಕಾತಿ 

D) ತೆರಿಗೆ ಪಾವತಿ 

ಸರಿಯಾದ ಉತ್ತರ: A) EPFO ಸೇವೆಗಳು 

ವಿವರಣೆ: ನೌಕರರ ಭವಿಷ್ಯ ನಿಧಿ ಸಂಸ್ಥೆಯ (EPFO) ತನ್ನ ಡಿಜಿಟಲ್ ವಹಿವಾಟು ಮತ್ತು ಪಾರದರ್ಶಕತೆಯನ್ನು ಹೆಚ್ಚಿಸಲು E-PRAAPTI ವೇದಿಕೆಯನ್ನು ಬಳಸುತ್ತಿದೆ.

8) ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರು PMGSY-IV ( ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆ-4) ಅನ್ನು ಎಲ್ಲಿ ಉದ್ಘಾಟಿಸಿದರು? 

A) ಮಧ್ಯ ಪ್ರದೇಶ್ 

B) ಗುಜರಾತ್ 

C) ಒಡಿಸ್ಸಾ 

D) ಕರ್ನಾಟಕ 

ಸರಿಯಾದ ಉತ್ತರ: C) ಒಡಿಸ್ಸಾ

ವಿವರಣೆ: ಗ್ರಾಮೀಣ ಭಾಗದ ರಸ್ತೆ ಸಂಪರ್ಕವನ್ನು ಮತ್ತಷ್ಟು ಸುಧಾರಿಸಲು ಒರಿಸ್ಸಾದಲ್ಲಿ ಈ ನಾಲ್ಕನೇ ಹಂತದ ಯೋಜನೆಯನ್ನು ಪ್ರಾರಂಭಿಸಲಾಗಿದೆ.

9) ಭಾರತದಲ್ಲಿ ಮಹಿಳೆಯರು ಮತ್ತು ಪುರುಷರು 2025ರ ವರದಿಯ ಪ್ರಕಾರ ಜನನ ಸಮಯದ ಲಿಂಗಾನುಪಾತ ಎಷ್ಟಿದೆ?

A) 905

B) 917

C) 951

D) 925

ಸರಿಯಾದ ಉತ್ತರ: B) 917

ವಿವರಣೆ: ಇತ್ತೀಚಿನ ವರದಿಯ ಪ್ರಕಾರ 2021 23ರ ಅವಧಿಯಲ್ಲಿ ಭಾರತದಲ್ಲಿ ಪ್ರತಿ ಒಂದು ಸಾವಿರ ಗಂಡು ಮಕ್ಕಳಿಗೆ ಜನಿಸುವ ಹೆಣ್ಣು ಮಕ್ಕಳ ಸಂಖ್ಯೆ ಲಿಂಗಾನುಪಾತ 917 ರಷ್ಟಿದೆ.

10) ಭಾರತೀಯ ಸೇನೆಯು ಆಪರೇಷನ್ ನೇತ್ರ 1.0 ಎಂಬ ಸುಧಾರಿತ ಶಸ್ತ್ರ ಚಿಕಿತ್ಸಾ ಕಣ್ಣಿನ ಸಿಬಿರವನ್ನು ಎಲ್ಲಿ ನಡೆಸಿತು?

A) ಲಡಾಖ್

B) ಅರುಣಾಚಲ ಪ್ರದೇಶ 

C) ನವದೆಹಲಿ 

D) ಬಿಹಾರ್

ಸರಿಯಾದ ಉತ್ತರ: A) ಲಡಾಖ್

ವಿವರಣೆ: ಲಡಾಖ್ ನ ದೂರದ ಪ್ರದೇಶದ ಜನರಿಗೆ ಸುಧಾರಿತ ಕಲಿನ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆ ನೀಡಲು ಭಾರತೀಯ ಸೇನೆಯು ಈ ವಿಶೇಷವನ್ನು ಯಶಸ್ವಿಯಾಗಿತ್ತು ಎಂದು ಉಲ್ಲೇಖಿಸಲಾಗಿದೆ. 

ಪ್ರಶ್ನೆ 11) ಇತ್ತೀಚಿಗೆ ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು (World Press Freedom Day) ಯಾವಾಗ ಆಚರಿಸಲಾಯಿತು? 

A) ಮೇ 5 

B) ಮೇ 8 

C) ಮೇ 3

D) ಜೂನ್ 5 

ಸರಿಯಾದ ಉತ್ತರ: C) ಮೇ 3

ವಿವರಣೆ: ಪತ್ರಿಕೋದ್ಯಮದ ಸ್ವಾತಂತ್ರ್ಯ ಮತ್ತು ಅದರ ಮಹತ್ವವನ್ನು ಸಾರಲು ಪ್ರತಿ ವರ್ಷ ಮೇ 3 ರಂದು ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನವನ್ನು ಆಚರಿಸಲಾಗುತ್ತದೆ.

ಪ್ರಶ್ನೆ 12) ಯಾವ ದೇಶವು 2026ರ ಏಷ್ಯನ್ ಕಪ್ ಫುಟ್ಬಾಲ್ ಪಂದ್ಯಾವಳಿಯ ಆತಿಥ್ಯ ವಹಿಸಲಿದೆ?

A) ಭಾರತ 

B) ದಕ್ಷಿಣ ಕೊರಿಯಾ 

C) ಸೌದಿ ಅರೇಬಿಯಾ 

D) ದುಬೈ 

ಸರಿಯಾದ ಉತ್ತರ: C) ಸೌದಿ ಅರೇಬಿಯಾ 

ವಿವರಣೆ: ಯಶನ ಪುಟ್ಬಾಲ್ ಕಾನ್ಫಡರೆಷನ್ ಘೋಷಣೆಯಂತೆ 2026ರ ಪ್ರಮುಖ ಫುಟ್ಬಾಲ್ ಸೌದಿ ಅರೇಬಿಯಾದಲ್ಲಿ ನಡೆಯಲಿದೆ ಎಂದು ಹೇಳಲಾಗಿದೆ.

ಪ್ರಶ್ನೆ 13) ಇತ್ತೀಚೆಗೆ ಭಾರತದ ಯಾವ ನಗರದಲ್ಲಿ ಮೊಟ್ಟ ಮೊದಲ ಗ್ರೀನ್ ಹೈಡ್ರೋಜನ್ ಪ್ಲಾಂಟ್ ಅನ್ನು ಉದ್ಘಾಟಿಸಲಾಗಿದೆ?

A) ಕರ್ನಾಟಕ 

B) ಮಹಾರಾಷ್ಟ್ರ 

C) ಬಿಹಾರ್ 

D) ಅಸ್ಸಾಂ 

ಸರಿಯಾದ ಉತ್ತರ: D) ಅಸ್ಸಾಂ 

ವಿವರಣೆ: ಸುಸ್ಥಿರ ಇಂಧನ ಮೂಲಗಳನ್ನು ಉತ್ತೇಜಿಸಲು ಅಸ್ಸಾಂನ ಟಿನ್ಸುಕಿಯಾದಲ್ಲಿ ಭಾರತದ ಪ್ರಮುಖ ಹಸಿರು ಹೈಡ್ರೋಜನ್ ಉತ್ಪಾದನಾ ಘಟಕವನ್ನು ಸ್ಥಾಪಿಸಲಾಗಿದೆ.

ಪ್ರಶ್ನೆ 14) ನೀತಿ ಆಯೋಗದ ನೂತನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ (CEO) ಇತ್ತೀಚೆಗೆ ಯಾರು ನೇಮಕಗೊಂಡಿದ್ದಾರೆ?

A) ಬಿ ವಿ ಆರ್ ಸುಬ್ರಮಣ್ಯಂ 

B) ಅರವಿಂದ್ ಪಣಗಾರಿಯ

C) ಅಮಿತಾಬ್ ಕಾಂತ್ 

D) ಯೋಗಿರಾಜ್ 

ಸರಿಯಾದ ಉತ್ತರ: A) ಬಿ ವಿ ಆರ್ ಸುಬ್ರಮಣ್ಯಂ 

ವಿವರಣೆ: ಕೇಂದ್ರ ಸರ್ಕಾರದ ಪ್ರಮುಖ ಥಿಂಕ್ ಟ್ಯಾಂಕ್ ಆದ ನೀತಿ ಆಯೋಗದ ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸಲು ಇವರನ್ನ ನೇಮಿಸಲಾಗಿದೆ. 

ಪ್ರಶ್ನೆ 15) ಸೂರ್ಯ ಕಿರಣ್ ಎಂಬುದು ಭಾರತ ಮತ್ತು ಯಾವ ದೇಶದ ನಡುವಿನ ಜಂಟಿ ಮಿಲಿಟರಿ ತಾಲಿಮು ಆಗಿದೆ?

A) ಬಾಂಗ್ಲಾದೇಶ 

B) ನೇಪಾಳ 

C) ಚೀನಾ

D) ಶ್ರೀಲಂಕಾ 

ಸರಿಯಾದ ಉತ್ತರ: B) ನೇಪಾಳ 

ವಿವರಣೆ: ಭಾರತ ಮತ್ತು ನೇಪಾಳ ಸೇನೆಗಳ ನಡುವಿನ ಪರಸ್ಪರ ಸಹಕಾರ ಮತ್ತು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳ ತರಬೇತಿಗಾಗಿ ತಾಲಿಮು ನಡೆಸಲಾಗುತ್ತದೆ.

ಪ್ರಶ್ನೆ 16) ಇತ್ತೀಚಿಗೆ ಸುದ್ದಿಯಲ್ಲಿದ್ದ ಸಹ್ಯಾದ್ರಿ ಹುಲಿ ಸಂರಕ್ಷಿತ ಪ್ರದೇಶ (Sahyadri Tiger Reserve) ಯಾವ ರಾಜ್ಯದಲ್ಲಿದೆ? 

A) ಮಹಾರಾಷ್ಟ್ರ 

B) ತಮಿಳುನಾಡು 

C) ಕೇರಳ 

D) ರಾಜಸ್ಥಾನ್ 

ಸರಿಯಾದ ಉತ್ತರ: A) ಮಹಾರಾಷ್ಟ್ರ

ವಿವರಣೆ: ಪಶ್ಚಿಮ ಘಟ್ಟಗಳ ಸಂರಕ್ಷಣೆ ಮತ್ತು ಹುಲಿಗಳ ಸಂತತಿಯನ್ನು ಕಾಪಾಡುವ ನಿಟ್ಟಿನಲ್ಲಿ ಮಹಾರಾಷ್ಟ್ರದ ಪ್ರದೇಶವು ಸುದ್ದಿಯಲ್ಲಿದೆ. 

ಪ್ರಶ್ನೆ 17) ಇತ್ತೀಚೆಗೆ ಗಾಂಧಿ ಮಂಡೇಲಾ ಪ್ರಶಸ್ತಿಗೆ ಬಾಜನರಾದವರು ಯಾರು?

A) ನರೇಂದ್ರ ಮೋದಿ 

B) ದಲೈ ಲಾಮಾ 

C) ಕೈಲಾಶ್ ಸತ್ಯಾರ್ಥಿ 

D) ಹರಿ ವರ್ಧನ್ ಸಿಂಗ್ 

ಸರಿಯಾದ ಉತ್ತರ: B) ದಲೈ ಲಾಮಾ 

ವಿವರಣೆ: ಶಾಂತಿ ಮತ್ತು ಅಹಿಂಸೆಯನ್ನು ಉತ್ತೇಜಿಸುವಲ್ಲಿ ನೀಡಿದ ಕೊಡುಗೆಗಾಗಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರಿಗೆ ಈ ಪ್ರಶಸ್ತಿ ನೀಡಲಾಗಿದೆ.

ಪ್ರಶ್ನೆ 18) ಇತ್ತೀಚಿಗೆ ಬಿಡುಗಡೆಯಾದ ವಿಶ್ವ ಸಂತೋಷ ಸೂಚ್ಯಂಕ 2026 ರಲ್ಲಿ ಅಗ್ರಸ್ಥಾನ ಪಡೆದ ದೇಶ ಯಾವುದು? 

A) ಐರ್ಲೆಂಡ್ 

B) ಡೆನ್ಮಾರ್ಕ್ 

C) ಪಿನ್ಲ್ಯಾಂಡ್ 

D) ನಾರ್ವೆ 

ಸರಿಯಾದ ಉತ್ತರ: C) ಪಿನ್ಲ್ಯಾಂಡ್

ವಿವರಣೆ: ಸತತ ಹಲವು ವರ್ಷಗಳಿಂದ ಪಿನ್ಲ್ಯಾಂಡ್ ವಿಶ್ವದ ಅತ್ಯಂತ ಸಂತೋಷದಾಯಕ ದೇಶಗಳ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಕಾಯ್ದುಕೊಂಡಿದೆ. 

 

19) ಭಾರತದ ಯಾವ ಬಾಹ್ಯಾಕಾಶ ಯೋಜನೆಗೆ ಸಂಬಂಧಿಸಿದಂತೆ ವ್ಯೋಮ ಮಿತ್ರ ಎಂಬ ಹ್ಯೂಮನಾಯ್ಡ ರೋಬೋಟ್ ಅನ್ನು ತಯಾರಿಸಲಾಗಿದೆ?

A) ಚಂದ್ರಯಾನ 3 

B) ಗಗನಯಾನ 

C) ಆದಿತ್ಯ L1

D) ಮಂಗಳಯಾನ 2 

ಸರಿಯಾದ ಉತ್ತರ: B) ಗಗನಯಾನ

ವಿವರಣೆ: ಮಾನವ ಸಹಿತ ಬಾಹ್ಯಾಕಾಶಯಾನದ ಮೊದಲು ಪರೀಕ್ಷಾರ್ಥವಾಗಿ ಹೆಣ್ಣು ರೋಬೋಟ್ (ವ್ಯೋಮ ಮಿತ್ರ) ಅನ್ನು ಇಸ್ರೋ ಬಾಹ್ಯಾಕಾಶಕ್ಕೆ ಕಳಿಸಲಾಗಿದೆ. 

20) ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ಗರಿಷ್ಠ ಸಂಖ್ಯೆಯ ಖಾತೆಗಳು ಮತ್ತು ಠೇವಣಿಗಳನ್ನು ಹೊಂದಿರುವ ರಾಜ್ಯ ಯಾವುದು? 

A) ಮಹಾರಾಷ್ಟ್ರ 

B) ಕೇರಳ 

C) ತಮಿಳುನಾಡು 

D) ಉತ್ತರ ಪ್ರದೇಶ 

ಸರಿಯಾದ ಉತ್ತರ: D) ಉತ್ತರ ಪ್ರದೇಶ 

ಈ ದೈನಂದಿನ  ಪ್ರಶ್ನೆಗಳ ಮೂಲಕ 

✓ ಪ್ರಚಲಿತ ಘಟನೆಗಳ ಬಗ್ಗೆ ಸ್ಪಷ್ಟ ಜ್ಞಾನ ಪಡಿಯಬಹುದು

✓ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಲು ಸಹಾಯಕವಾಗುತ್ತದೆ 

✓ ಈ ಪ್ರಶ್ನೆಗಳು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಉಪಯುಕ್ತವಾಗುತ್ತದೆ .

ಇನ್ನಷ್ಟು ಓದಿ:https://superstudyiqgk.com/

Leave a Comment