Telegram Join My Telegram   WhatsApp Join My WhatsApp

RRB ಮತ್ತು SSC ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಸಂಪೂರ್ಣ GK ಮಾರ್ಗದರ್ಶಿ 2026

Spread the love

ಭಾರತದಲ್ಲಿ ಸರ್ಕಾರಿ ಉದ್ಯೋಗ ಪಡೆಯುವುದು ಲಕ್ಷಾಂತರ ವಿದ್ಯಾರ್ಥಿಗಳ ಕನಸು. ಅದರಲ್ಲೂ ರೈಲ್ವೆ ನೇಮಕಾತಿ ಮಂಡಳಿ ನಡೆಸುವ  RRB NTPC,RRB GROUP D,RRB ALP,RRB JE ಪರೀಕ್ಷೆಗಳು ಮತ್ತು SSC ನೇಮಕಾತಿ ಮಂಡಳಿ ನಡೆಸುವ SSC GD,SSC CGL,SSC MTS,SSC CHSL ಪರೀಕ್ಷೆಗಳು ನಮ್ಮ ಕರ್ನಾಟಕದ ಜನರಿಗೆ ಅತಿ ಹೆಚ್ಚು ಅವಕಾಶಗಳನ್ನು ತಂದುಕೊಡುತ್ತದೆ. ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಭ್ಯರ್ಥಿಯ ಭವಿಷ್ಯವನ್ನು ನಿರ್ಧರಿಸುವ ವಿಷಯವೇ ಸಾಮಾನ್ಯ ಜ್ಞಾನ (GENARAL KNOWLEDGE). ಎಲ್ಲಾ ವಿದ್ಯಾರ್ಥಿಗಳು REASONING,MATHS ನಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದುಕೊಂಡರೆ ಈ ಸಾಮಾನ್ಯ ಜಿಕೆಯಲ್ಲಿ ಕಡಿಮೆ ಅಂಕಗಳನ್ನು ಪಡೆದುಕೊಳ್ಳುತ್ತಾರೆ. ಈ ಬ್ಲಾಗ್ ನಲ್ಲಿ 100% GK ಯಲ್ಲಿ ಯಶಸ್ಸು ಪಡೆಯಲು ಸಂಪೂರ್ಣವಾಗಿ ಯಾವ ರೀತಿ ಓದಬೇಕು ಅಂತ ತಿಳಿದುಕೊಳ್ಳೋಣ.

 

1) ಪರೀಕ್ಷೆಯ ಪಠ್ಯಕ್ರಮದ ಅರಿವು (understanding this syllabus)

ಯಾವುದೇ ಯುದ್ಧವನ್ನು ಗೆಲ್ಲಲು ಶಸ್ತ್ರಾಸ್ತ್ರಗಳು ರೆಡಿ ಆಗಿರಬೇಕು ಅದೇ ರೀತಿ ಪರೀಕ್ಷೆಯನ್ನು ಗೆಲ್ಲಲು ಸಿಲಬಸ್ ಗೊತ್ತಿರಬೇಕು.RRB ಮತ್ತು SSC ಪರೀಕ್ಷೆಗಳಲ್ಲಿ GK ಭಾಗವನ್ನು ಕೆಳಗಿನಂತೆ ವಿಂಗಡಿಸಬೇಕು.

  • ಇತಿಹಾಸ (HISTORY): ಪ್ರಾಚೀನ ಕಾಲದ ಇತಿಹಾಸ, ಮಧ್ಯಕಾಲೀನ ಇತಿಹಾಸ, ಆಧುನಿಕ ಭಾರತದ ಇತಿಹಾಸ ಇವುಗಳೆಲ್ಲವನ್ನು ಓದಬೇಕು ಇದರ ಜೊತೆಗೆ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಓದಿಕೊಳ್ಳಬೇಕು.
  • ಭೂಗೋಳಶಾಸ್ತ್ರ (GEOGRAPHY): ಭಾರತದ ನದಿಗಳು, ಪರ್ವತಗಳು, ರಾಜ್ಯಗಳು, ಜಲಸಂಧಿಗಳು, ಗಡಿ ರೇಖೆಗಳು, ಅಂತರಾಷ್ಟ್ರೀಯ ಭೂಗೋಳದ ಬಗ್ಗೆ ಓದಿಕೊಳ್ಳಬೇಕು.
  • ಸಂವಿಧಾನ(POLITY): ಮೂಲಭೂತ ಹಕ್ಕುಗಳು, ರಾಷ್ಟ್ರಪತಿ ಉಪರಾಷ್ಟ್ರಪತಿ, ಸಂಸತ್ತು, ಪ್ರಮುಖ ತಿದ್ದುಪಡಿಗಳು, ಸಂವಿಧಾನದ ರಚನಾ ಸಭೆ ಇವುಗಳು ಎಲ್ಲವನ್ನು ಓದಿಕೊಳ್ಳಬೇಕು
  • ಸಾಮಾನ್ಯ ವಿಜ್ಞಾನ (GENARAL SCIENCE): ಜೀವಶಾಸ್ತ್ರ ಭೌತಶಾಸ್ತ್ರ, ರಸಾಯನಶಾಸ್ತ್ರ NCERT OR DSERT ಪುಸ್ತಕಗಳನ್ನು ಸಂಪೂರ್ಣವಾಗಿ ಓದಿಕೊಳ್ಳಬೇಕು ಇದು ರೈಲ್ವೆ ಪರೀಕ್ಷೆಗೆ ಬಹಳ ಮುಖ್ಯ
  • ಪ್ರಚಲಿತ ಘಟನೆಗಳು (CURRENT AFFAIRS): ಕಳೆದ ಒಂದು ವರ್ಷದ ಪ್ರಮುಖ ಸುದ್ದಿಗಳನ್ನು ಓದಿಕೊಳ್ಳಬೇಕು.

 

2) ಪ್ರಚಲಿತ ಘಟನೆಗಳ ದಿನನಿತ್ಯ ತಯಾರಿ

ಸದ್ಯದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 25% ಇಂದ 30% ಪ್ರಶ್ನೆಗಳು ಪ್ರಚಲಿತ ಘಟನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ.

  • ಮೊದಲನೆಯದಾಗಿ ದಿನನಿತ್ಯ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳನ್ನು ಓದಬೇಕು.
  • ನಮ್ಮ SUPER STUDY IQ GK ಟೆಲಿಗ್ರಾಂ ಚಾನಲ್ ನಲ್ಲಿ ದಿನನಿತ್ಯ ಅಪ್ಡೇಟ್ಸ್ ಗಳನ್ನು ಗಮನಿಸಿ.
  • ಕ್ರೀಡೆಗಳು, ಪ್ರಶಸ್ತಿಗಳು, ಯೋಜನೆಗಳು, ನೇಮಕಾತಿಗಳು, ಒಲಂಪಿಕ್ಸ್ ಗಳು, ಪ್ರಮುಖ ಇಂಡೆಕ್ಸ್ ಗಳು, ಎಕನಾಮಿಕ್ ಪ್ರಚಲಿತ ಘಟನೆಗಳು, ಅಂತರರಾಷ್ಟ್ರೀಯ ಪ್ರಚಲಿತ ಘಟನೆಗಳ ಬಗ್ಗೆ ಎಲ್ಲವನ್ನು ಓದಿಕೊಳ್ಳಬೇಕು.

 

3) ಸಾಮಾನ್ಯ ವಿಜ್ಞಾನಕ್ಕೆ ವಿಶೇಷ ಒತ್ತು (SCIENCE FOR RRB)

ನೀವು RRB ALP ಮತ್ತು RRB GROUP D ಪರೀಕ್ಷೆಗಳಿಗೆ ಓದುತ್ತಿದ್ದರೆ ವಿಜ್ಞಾನವೇ ನಿಮ್ಮ ಯಶಸ್ಸಿನ ಕಿಲಿಕೈ ಆಗಿರುತ್ತದೆ. ಉಳಿದೆಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಈ ವಿಜ್ಞಾನದ ಪ್ರಶ್ನೆಗಳು ಉಪಯುಕ್ತವಾಗುತ್ತವೆ.

  • ಜೀವಶಾಸ್ತ್ರ: ಜೀವಕೋಶಗಳು, ವಿಟಮಿನ್ ಗಳು, ಮಾನವನ ದೇಹದ ಅಂಗಾಂಗಗಳು, ರೋಗಗಳು, ರಕ್ತದ ಅಧ್ಯಯನಗಳು ಇವುಗಳನ್ನು ಓದಿಕೊಳ್ಳಿ
  • ಭೌತಶಾಸ್ತ್ರ: ಘಟಕಗಳು, ಶಬ್ದಗಳು, ಕಾಂತಿಮಾನ ನ್ಯೂಟನ್ ನಿಯಮಗಳು ಇವುಗಳ ಮೇಲೆ ಗಮನಹರಿಸಿ
  • ರಸಾಯನಶಾಸ್ತ್ರ: ಆಧುನಿಕ ಆವರ್ತಕ ಕೋಷ್ಟಕ, ಮುತ್ತು ರಾಸಾಯನಿಕ ಹೆಸರುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಿ.

4) GK  ನೆನಪಿಟ್ಟುಕೊಳ್ಳಲು ಶಾರ್ಟ್ ಕಟ್ ಟ್ರಿಕ್ಸ್ (GK  TRICKS)

ಸಾಕಷ್ಟು ಮಾಹಿತಿಗಳನ್ನು ನೆನಪಿಟ್ಟುಕೊಳ್ಳುವುದು ಕಷ್ಟ. ಉದಾಹರಣೆ ಹೇಳಬೇಕೆಂದರೆ ಮೊಘಲ್ ಸಾಮ್ರಾಜ್ಯದ ಅರಸರು ಕ್ರಮಗಳ ಹೆಸರನ್ನು ನೆನಪಿಟ್ಟುಕೊಳ್ಳುವುದು BHAJSA ಎಂದರೆ (babar, humayun,Akbar,Jhangir,Shah jahan, Aurangajeb) ನಂತಹ ಟ್ರಿಕ್ಸ್ ಗಳನ್ನು ಬಳಸಿ ಈ ಟ್ರಿಕ್ಸ್ ನಿಮ್ಮ ಸಮಯವನ್ನು ಉಳಿಸುತ್ತದೆ.

 

5) ಹಳೆಯ ಪ್ರಶ್ನೆ ಪತ್ರಿಕೆ ವಿಶ್ಲೇಷಣೆ (,PYQ Analysis)

ಕಳೆದ 5 ವರ್ಷಗಳ ssc ಮತ್ತು rrb ಪ್ರಶ್ನೆ ಪತ್ರಿಕೆಗಳನ್ನು ಬಿಡಿಸುವುದು ಕಡ್ಡಾಯ. ಇದರಿಂದ ಪ್ರಶ್ನೆಗಳು ಯಾವ ರೀತಿ ಬರುತ್ತವೆ ಮತ್ತು ಯಾವ ವಿಷಯಕ್ಕೆ ಹೆಚ್ಚು ಆದ್ಯತೆ ನೀಡಬೇಕು ಎಂದು ತಿಳಿಯುತ್ತದೆ. ರೈಲ್ವೆ ಪರೀಕ್ಷೆಗಳಲ್ಲಿ ಅನೇಕ ಪ್ರಶ್ನೆಗಳು ಪುನರಾವರ್ತನೆಯಾಗುತ್ತವೆ ಆದ್ದರಿಂದ ಇವುಗಳನ್ನು ನೋಡಿಕೊಳ್ಳಬೇಕು.

 

6) ಮಾಕ್ ಟೆಸ್ಟ್ ಮತ್ತು ಸ್ವಯಂ ಮೌಲ್ಯಮಾಪನ

ಓದಿದ್ದನ್ನು ಪರೀಕ್ಷಿಸಲು ಆನ್ಲೈನ್ ನಲ್ಲಿ ರಸಪ್ರಶ್ನೆಗಳನ್ನು ತೆಗೆದುಕೊಳ್ಳಿ. ನಮ್ಮ ವೆಬ್ಸೈಟ್ ನಲ್ಲಿ DAILY GK QUIZ ಅನ್ನು FREE ಆಗಿ ನಡೆಸಲಾಗುತ್ತದೆ. ಇದನ್ನು ದಿನಾಲು ಬಿಡಿಸುವುದರಿಂದ ನಿಮ್ಮ ವೇಗ ಮತ್ತು ನಿಖರತೆ ಗೊತ್ತಾಗುತ್ತದೆ

 

7) ಸಬ್ಜೆಕ್ಟ್ ವೈಸ್ ಮಾಸ್ಟರ್ ಪ್ಲಾನ್

ಕೇವಲ GK ಓದಿ ಎಂದು ಹೇಳುವ ಬದಲು ಎಲ್ಲಾ ವಿಷಯಗಳನ್ನು ಯಾವ ರೀತಿ  ಬೇರಿಸಬೇಕು ಎಂದು  ಬರೆಯಿರಿ.

  • ಉದಾಹರಣೆಗೆ: ಕೇವಲ 30 ದಿನಗಳಲ್ಲಿ ವಿಜ್ಞಾನ ವಿಷಯವನ್ನು ಪೂರ್ಣಗೊಳಿಸುವುದು ಹೇಗೆ??RRB ವಿದ್ಯಾರ್ಥಿಗಳಿಗೆ ಇದು ವಿಶೇಷವಾದ ಟಿಪ್ಸ್.
  • ಒಳಗಿನ ಮಾಹಿತಿ: ಯಾವ ಪುಸ್ತಕ ಓದಬೇಕು (NCERT ಮತ್ತು LUCENT) ನಲ್ಲಿ ಯಾವ ಚಾಪ್ಟರ್ ಗಳಿಗೆ ಎಷ್ಟು ಮಾರ್ಕ್ಸ್ ಬರುತ್ತದೆ ಎಂದು ಪಟ್ಟಿಮಾಡಿ.

 

8) ರಾಜ್ಯವಾರು GK (STATE WISE GK FOR CENTRAL EXAMS)

SSC ಮತ್ತು RRB ಪರೀಕ್ಷೆಗಳಲ್ಲಿ ಪ್ರತಿ ರಾಜ್ಯದ ಕಲೆ, ಸಂಸ್ಕೃತಿ, ಹಬ್ಬಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ.

  • ಕಂಟೆಂಟ್ ಐಡಿಯಾ: ಭಾರತದ ಪ್ರಮುಖ ರಾಜ್ಯಗಳು, ಅವುಗಳ ರಾಜ್ಯ ನೃತ್ಯಗಳು, ರಾಷ್ಟ್ರೀಯ ಉದ್ಯಾನವನಗಳು, ಪ್ರಮುಖ ಆಣೆಕಟ್ಟುಗಳು ಬಗ್ಗೆ ಒಂದು ಸರಣಿ ಬರೆಯಿರಿ.
  • ಇವುಗಳನ್ನು ಸುಲಭವಾಗಿ ನೆನಪಿಡಲು ನಿಮ್ಮದೇ ಆದ ಕೋಡ್ ವರ್ಡ್ ಮತ್ತು ಟ್ರಿಕ್ಸ್ ಅನ್ನ ಮಾಡಿಕೊಳ್ಳಿ.

👍ಆದ್ದರಿಂದ ನಾವು ಹೇಳಿದಂತೆ ಮೇಲಿನ ಎಲ್ಲಾ ಟಾಪಿಕ್ ಗಳನ್ನು ಗಮನಹರಿಸಿ ಪರೀಕ್ಷೆ ಮೇಲೆ ಪೋಕಸ್ ಮಾಡಿ ನೀವು ಪರೀಕ್ಷೆಯಲ್ಲಿ ಪಕ್ಕಾ 100% ಸಾಧಿಸುತ್ತೀರಾ.

ಇನ್ನು ಹೆಚ್ಚಿನ ಪ್ರಶ್ನೆಗಳಿಗೆ ನಮ್ಮ SUPER STUDY IQ GK ಟೆಲಿಗ್ರಾಂ, ಯೂಟ್ಯೂಬ್ ನಮ್ಮ ವೆಬ್ಸೈಟ್ ಗೆ ಜಾಯಿನ್ ಆಗಿ

 

ಇನ್ನಷ್ಟು ಓದಿ:https://superstudyiqgk.com/2025-%e0%b2%b0-%e0%b2%aa%e0%b3%8d%e0%b2%b0%e0%b2%ae%e0%b3%81%e0%b2%96-top-100-%e0%b2%aa%e0%b3%8d%e0%b2%b0%e0%b2%9a%e0%b2%b2%e0%b2%bf%e0%b2%a4/

Leave a Comment